ಸಕಲೇಶಪುರ : ಸಕಲೇಶಪುರದ ರಾಮಧೂತ ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ, ಅಯೋಧ್ಯ ಬಲಿದಾನ ದಿವಸ್ ನಿಮಿತ್ತ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು

ಕಾರ್ಯಕ್ರಮದಲ್ಲಿ 270 ಯುನಿಟ್ ರಕ್ತ ಸಂಗ್ರಹಣೆಯಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಪಟ್ಟಣದ ಹಾಡ್ಯ ಸುಬ್ಬೆಗೌಡ ಪುರಭವನದಲ್ಲಿ ಇಂದು ಅಯೋಧ್ಯ ಬಲಿದಾನ ದಿವಸ್ ನಿಮಿತ್ತ ಸಕಲೇಶಪುರದ ರಾಮದೂತ ಹಿಂದೂ ಮಹಾಗಣಪತಿ ಸೇವಾ ಸಮಿತಿ ಇವರ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಜೀವ ರಕ್ಷನಿಧಿ ಮತ್ತು ಜೀವ ಸಂಜೀವಿನಿ ರಕ್ತನಿಧಿ ಹಾಸನ ಇವರುಗಳು ಕಾರ್ಯಕರ್ತರು ನೀಡಿದ ರಕ್ತವನ್ನು ಪರೀಕ್ಷೆ ನಡೆಸಿ ಶೇಖರಣೆ ಮಾಡಿದರು.

ಈ ಕಾರ್ಯಕ್ರಮವು ಪ್ರತಿವರ್ಷದಂತೆ ಈ ವರ್ಷವು ಅಯೋಧ್ಯೆಯಲ್ಲಿ ಬಲಿದಾನ ಮಾಡಿದ ಕಾರ್ಯಕರ್ತರ ನೆನಪಿಗಾಗಿ ದೇಶಾದ್ಯಂತ ನವೆಂಬರ್ ತಿಂಗಳಲ್ಲಿ ರಕ್ತದಾನ ಶಿಬಿರ ನಡೆಸಿಕೊಂಡು ಬರುತಿದ್ದು ಬಲಿದಾನ ಅದವರ ನೆನಪು ಮತ್ತು ಬಲಿದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಅತಿ ಹೆಚ್ಚಿದ್ದು, ಕಾರ್ಯಕರ್ತರು ಹೆಚ್ಚು ರಕ್ತದಾನ ಮಾಡುವಂತೆ ಪ್ರೇರಣೆ ನೀಡಲಾಗುವುದು ಹಾಗೂ ಸಕಲೇಶಪುರದಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚು ಇದ್ದು, ಅವರಿಗೆ ರಕ್ತದ ಅವಶ್ಯಕತೆಯೂ ಹೆಚ್ಚಿದ್ದೆ ಆದ್ದರಿಂದ ದಯಮಾಡಿ ರಕ್ತದಾನ ಶಿಬಿರಕ್ಕೆ ಬಂದು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕೇಳಿಕೊಂಡರು ಕಾರ್ಯಕ್ರಮದ ಆಯೋಜಕ ಪ್ರದೀಪ್ ಪೂಜಾರಿ ಹೇಳಿದರು.

ಬೆಳಗ್ಗೆ 7:30 ರಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು 11 ಸುಮಾರಿಗೆ ಉದ್ಘಾಟನೆ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಡಾ|| ನಿಶ್ಚಿತ ಕಿಶೋರ್ ಸೇರಿದಂತೆ ಪುರಸಭೆ ಅಧ್ಯಕ್ಷರಾದ ಜ್ಯೋತಿ ರಾಜ್ ಕುಮಾರ್. ಪ್ರತಿಭಾ ಮಂಜುನಾಥ್. ಅರೇಹಳ್ಳಿಯ ಓದೇಶ್ ಮೌರ್ಯ. ಹೊಸಕೆರೆ ಎಸ್ಟೇಟ್ ಮಾಲೀಕರಾದ ಮಂಜುನಾಥ್. ರಕ್ತನಿಧಿಯ ವ್ಯವಸ್ಥಾಪಕರುಗಳಾದ ಮೋಹನ್ ಮತ್ತು ಮೋಹನ್ ಕುಮಾರ್ ಸೇರಿದಂತೆ ಸಕಲೇಶಪುರ ತಾಲ್ಲೂಕಿನ ಉಪವಿಭಾಗಾಧಿಕಾರಿ ಕು|| ಶೃತಿ ಅವರು ಭಾಗವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ ಡಾ|| ನಿಶ್ಚಿತ ಮಾತನಾಡಿ ರಕ್ತದಾನ ಪ್ರತಿಯೊಬ್ಬರು ಮಾಡಬೇಕು ಪ್ರಸ್ತುತ ಸಂದರ್ಭದಲ್ಲಿ ರಕ್ತದಾನ ಮಾಡುವುದರ ಬಗ್ಗೆ ಜಾಗೃತಿ ಮಾಡುವುದು ಸಹ ಸಂಘಟನೆಗಳ ಕಾರ್ಯವಾಗಿದೆ ಎಂದು ಅಧ್ಯಕ್ಷಿಯ ಭಾಷಣದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪುರಸಭೆ ಪೌರಕಾರ್ಮಿಕರಾದ ನಾಗರಾಜ್. ಕೆಲ ಸರ್ಕಾರಿ ನೌಕರರರುಗಳು ವಿಶೇಷವಾಗಿ ಮಹಿಳೆಯರ ಆಶಾಕ್ತರಾಗಿ ಬಂದು ರಕ್ತದಾನ ಮಾಡಿದ್ದು ಶಿಬಿರದ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಮುಖಂಡರಾದ ರಘು ಸಕಲೇಶಪುರ ಸೇರಿದಂತೆ ಮಂಜುನಾಥ್ ಕಬ್ಬಿನಗದ್ದೆ. ಬಜರಂಗದಳದ ಮುಖಂಡ ಕೌಶಿಕ್ ಹೆಚ್.ಎಂ. ಪ್ರತಾಪ್ ಪೂಜಾರಿ. ಶ್ರೀಜಿತ್ ಗೌಡ. ರವಿ ಹೆಬ್ಬಸಾಲೆ. ವಿಜಿತ್ ಗೌಡ. ವಿರೇಶ್ ಕಬ್ಬಿನಗದ್ದೆ. ದುಶ್ಯಾಂತ್ ಗೌಡ. ಕಲ್ಲರಹಳ್ಳಿ ರಾಜು. ಶಿವು ಜಿಪ್ಪಿ ಪ್ರದೀಪ್ ಜಿಮ್. ನಡಹಳ್ಳಿ ಶಶಿ. ರಘು. ಸೇರಿದಂತೆ ಇತರರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed