ಆಲೂರು :ತಾಲೂಕಿನ ಕೆ. ಹೊಸಕೋಟೆ ಹೋಬಳಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಾಸಿಕ ಸಭೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ ಎನ್ ಕುಮಾರ್ ವಹಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ನ ವಲಯ ಅಧ್ಯಕ್ಷರಾದ ರಘು ಪಾಳ್ಯರವರು. ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರುಕನ್ನಡ ನಾಡು,ನುಡಿ,ಭಾಷೆ, ಸಂಸ್ಕೃತಿ, ತನ್ನದೇ ಆದಂತ ವೈಶಿಷ್ಟ್ಯತೆಯನ್ನು ಹೊಂದಿದ್ದು ಕರ್ನಾಟಕದಲ್ಲಿ ಕನ್ನಡಾಂಬೆ ಎಲ್ಲಾ ಭಾಷೆಗಳಿಗೂ ಬದುಕು ಕೊಟ್ಟಿದ್ದು ಕೆಲ ಅನ್ಯ ಭಾಷೆಗಳಿಂದ ಅಲ್ಲದೆ ಇಂಗ್ಲಿಷ್ ವ್ಯಾಮೋಹದಿಂದ ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ . ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ರಘು ಪಾಳ್ಯವರು 2009ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಯಾಗಿ 2014 ರಿಂದ 2020 ರವರೆಗೆ ಆಲೂರು ತಾಲೂಕು ಕರವೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಾರಾಯಣಗೌಡರ ನೇತೃತ್ವದಲ್ಲಿ ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿರುತ್ತಾರೆ.

2014ರಲ್ಲಿ ಆಲೂರು ಲಯನ್ ಸೇವಾ ಸಂಸ್ಥೆಗೆ ಸೇರ್ಪಡೆಯಾಗಿ “ಸೇವೆಯೇ ನನ್ನ ಧ್ಯೇಯ”ಎಂಬ ಸಂಕಲ್ಪ ದೊಂದಿಗೆ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಲಯನ್ಸ್ ಸೇವಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತರುವಲ್ಲಿ ರಘು ಪಾಳ್ಯರವರು ಶ್ರಮಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ವಿಭಾಗದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಸಮಾಜ ಸೇವೆ , ಸೇವಾ ಮನೋಭಾವನೆ, ಕನ್ನಡ ನಾಡು ನುಡಿಯ ಸಂಸ್ಕೃತಿಯ ಕ್ಷೇತ್ರದ ಗಣಾನಿಯ ಸಾಧನೆಯನ್ನು ಪರಿಗಣಿಸಿ ಜಿಲ್ಲಾಡಳಿತ 2024ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಕೆ. ಹೊಸಕೋಟೆ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ದಿನೇಶ್, ಖಜಾಂಚಿ ಕುಮಾರ್, ಬೆಂಬಳೂರು ,ನಿಕಟಪೂರ್ವ ಅಧ್ಯಕ್ಷರು ಹರೀಶ್, ಉದಯ್ ಕುಮಾರ್ ಕಿತ್ತಗಳಲೆ, ರುದ್ರೇಶ್ ಕಾಡ್ಲೂರು, ಆಲೂರಿನ ಲಯನ್ಸ್ ಕ್ಲಬ್ ನಿಕಟ ಪೂರ್ವ ಕಾರ್ಯದರ್ಶಿ ಆನಂದ್, ಖಜಾಂಚಿ ಗಿರೀಶ್, ಪಾಳ್ಯ ಲಯನ್ಸ್ ಸುದೀಸ್, ಕೆ. ಹೊಸಕೋಟೆ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *