ಸಕಲೇಶಪುರ :- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿದನಹಳ್ಳಿ,ಮೊಗನಹಳ್ಳಿ,ಹೊಸಳ್ಳಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ಧರೂ ಸೇರಿದಂತೆ 500 ಕ್ಕೂ ಹೆಚ್ಚು ಜನ ವಾಸವಾಗಿರುತ್ತಾರೆ. ಆದರೆ ಈ ಭಾಗದಲ್ಲಿ ಬಿ.ಎಸ್.ಎನ್.ಎಲ್ ನೆಟ್ವವರ್ಕ್ ಸರಿಯಿಲ್ಲದೆ ಗ್ರಾಮಸ್ಥರು ದಿನ-ನಿತ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಭಾಗದಲ್ಲಿ ಹೆಚ್ಚು ಮಳೆ ಮತ್ತು ಕಾಡು ಪ್ರಾಣಿಗಳು ಸಮಸ್ಯೆಯು ಹೆಚ್ಚಿದೆ . ಈ ಗ್ರಾಮಗಳ ಜನರು ಬೆಂಗಳೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ವೃತ್ತಿ ಜೀವನೋಪಾಯಕ್ಕೆ ನೆಲೆಸಿದ್ದು, ಕಷ್ಟ-ಸುಖಕ್ಕೆ ಇವರನ್ನು ಸಂಪರ್ಕ ಮಾಡಲು ನೆಟ್ ವರ್ಕ್ ಸಮಸ್ಯೆಯಿದೆ.ಜೊತೆಗೆ ಈ ಭಾಗಕ್ಕೆ ಹೆಚ್ಚು ಪ್ರವಾಸಿಗರು ಬರುವುದರಿಂದ ಅವರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಗ್ರಾಮಗಳ 2ಕಿ.ಮೀ ವ್ಯಾಪ್ತಿಯಲ್ಲಿ ನೀರಿನ ಡ್ಯಾಮ್ ಇದ್ದು ಅನೇಕ ಕೈಗಾರಿಕ ಕೆಲಸಗಳು ಪ್ರತಿದಿನ ನಡೆಯುತ್ತಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಗ್ರಾಮಸ್ಥರು ಸೇರಿದಂತೆ ಕೂಲಿ ಕಾರ್ಮಿಕರು, ಅಧಿಕಾರಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಕೂಡಲೆ ಬಂದು ಹೊಸ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಟವರ್‌ನ್ನು ನಿರ್ಮಿಸಿಕೊಡಬೇಕಾಗಿ ಗ್ರಾಮಸ್ಥರ ಪರವಾಗಿ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಹೆಚ್. ಬಿ ಹೂವಣ್ಣ ಗೌಡ ಅಗ್ರಹಿಸಿದ್ದಾರೆ .