ಅರಸೀಕೆರೆ : ಶ್ರೀ ನಿರಂಜನ ಪೀಠದ ರುದ್ರಮುನಿ ಸ್ವಾಮಿಗಳವರ ನೇತೃತ್ವದಲ್ಲಿ ನವಂಬರ್ 16 ರಂದು ಅಸ್ತಿತ್ವಕ್ಕೆ ಬಂದಿರುವ ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘ ಧಾರ್ಮಿಕ ಕ್ಷೇತ್ರದ ಜೊತೆಗೆ ಆಧ್ಯಾತ್ಮಿಕ ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದೆ ಎಂದು ಸಹಕಾರ ಸಂಘದ ನೂತನ ಪದಾಧಿಕಾರಿಗಳು ಭರವಸೆ ನೀಡಿದರು .
ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಮೊದಲ ಬಾರಿ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಸಂಘ ಸಂಸ್ಥೆಗಳು ರಚನೆಗೊಂಡರೆ ಸಾಲದು ಸಾರ್ವಜನಿಕ ಕ್ಷೇತ್ರದಲ್ಲಿ ಜನಪರ ನಿಲುವು ಹಾಗೂ ಸೇವೆ ಮಾಡುವ ಪ್ರತಿಜ್ಞೆಯನ್ನು ಸಂಘದ ಪದಾಧಿಕಾರಿಗಳು ಸೇವೆ ಹಾಗೂ ಸದಸ್ಯರು ಕೈಗೊಳ್ಳುವ ಮೂಲಕ ಸೇವೆಯ ಆರಂಭಿಸಿದ್ದೆ ಆದರೆ ತಾವು ಮಾಡುವ ಸೇವೆ ಜನರಷ್ಟೇ ಅಲ್ಲ ಜನಾರ್ಧನ ಕೂಡ ಮೆಚ್ಚುತ್ತಾನೆ ಎಂದು ಸ್ವಾಮೀಜಿ ತಿಳಿಸಿದರು.
ಈ ಸಭೆಯಲ್ಲಿ ಉಪಾಧ್ಯಕ್ಷರಾದ ಎನ್ ಜಿ ಮರಳು ಸಿದ್ದ ಸ್ವಾಮಿ ನಾಗಸಮುದ್ರ, ನಿರ್ದೇಶಕರುಗಳಾದ ಎಸ್ ಸಿ ಗಂಗಾಧರಪ್ಪ ಸಸಿವಾಳ, ಎಂ ವಿ ಜಯಕುಮಾರ್ ತಿಮ್ಮನಹಳ್ಳಿ, ಕೆಎಂ ಕಲ್ಲೇಶಪ್ಪ ಕಲ್ಲುಸಾದರಹಳ್ಳಿ ಡಿ ಬಿ ಕುಮಾರ್ ದುಮ್ಮೇನಹಳ್ಳಿ ಎಮ್ ಸಿ ಚಂದ್ರಪ್ಪ ಮಾಡಳು ಸಿಕೆ ಸುಧಾ ಬೊಮ್ಮಸಮುದ್ರ ದ್ರಾಕ್ಷಾಯಿಣಿ ಹಳೆ ಕಲ್ಯಾಣಿ ಕಾರ್ಯನಿರ್ವಾಹಕ ಅಧಿಕಾರಿ ಆರ್ ಬಿ ಸುಷ್ಮಾ ದಿಬ್ಬೂರು ಉಪಸ್ಥಿತರಿದ್ದರು.