
ಅರಸೀಕೆರೆ : ತಾಲೂಕಿನ ಕಣಕಟ್ಟೆ ಹೋಬಳಿ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯ ಸನ್ನಿಧಾನದಲ್ಲಿ ಕಡೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ನೆರವೇರಿತು
ಬೆಳಗ್ಗೆಯಿಂದಲೇ ಮೂಲ ಸನ್ನಿಧಿಯಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು ತಳಿರು ತೋರಣ ಬಾಳೆ ಕಂದುಗಳಿಂದ ಬಗೆ ಬಗೆಯ ಹೂಗಳಿಂದ ಸಂಗ್ರಹಿಸಲಾಗಿತ್ತು ಅಲ್ಲದೆ ಬಣ್ಣ ಬಣ್ಣದ ವಿದ್ಯುತ್ ದ್ವೀಪಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು
ಸಂಜೆಯಾಗುತ್ತಿದ್ದಂತೆ ಮಹಿಳೆಯರು ಮಣ್ಣಿನ ಹಣತೆಗೆ ಎಣ್ಣೆ ಬತ್ತಿ ಹಾಕುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು ಇತ್ತ 8: ಗಂಟೆಯಾಗುತ್ತಿದ್ದಂತೆ ಧಾರ್ಮಿಕ ವಿಧಿ ವಿಧಾನಗಳಿಂದ ಮಹಿಳೆಯರು ಪೂಜೆ ಸಲ್ಲಿಸಿದರು
ಅರ್ಚಕರು ಮಹಾಮಂಗಳಾರತಿ ಸಲ್ಲಿಸಿದರು ಬಂದ ಭಕ್ತಾದಿಗಳಿಗೆ ಫಲಹಾರ ಹಾಗೂ ಪ್ರಸಾದ ವಿನಿಯೋಗ ನಡೆಯಿತು


