ಹಾಸನ : ತಾಲೂಕಿನ ಕಿತ್ತಾನೆ ಗ್ರಾಮದ ಬಳಿ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು (probationary IPS officer) ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಮೂಲಕ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಎಂಬುವರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕಿದ್ದು, ಅಧಿಕಾರ ಸ್ವೀಕರಿಸಲು ಜಿಲ್ಲಾ ಪೊಲೀಸ್ ವರಿಷ್ಠ (SP) ಕಚೇರಿಗೆ ಬರುತ್ತಿದ್ದಾಗಲೇ ಅಪಘಾತ ಸಂಭವಿಸಿದೆ.
ಹಾಸನ ತಾಲ್ಲೂಕಿನ ಕಿತ್ತಾನೆ ಬಳಿ ಇಂದು ಪೊಲೀಸ್ ಜೀಪ್‌ನ ಟೈಯರ್ ಸಿಡಿದು ಅಪಘಾತ ಸಂಭವಿಸಿತ್ತು. ಜೀಪ್‌ನಲ್ಲಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು
KA-13-G-1386 ನಂಬರ್‌ನ ಪೊಲೀಸ್ ಜೀಪ್ ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿರುವ ಪ್ರೊಬೇಷನರಿ ಅಧಿಕಾರಿ ಹರ್ಷಬರ್ಧನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹರ್ಷಬರ್ದನ್ ಸಾವನ್ನಪ್ಪಿದ್ದಾರೆ
ಹರ್ಷಬರ್ದನ್ 2023ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. 2022ನೇ ಬ್ಯಾಚ್‌ನಲ್ಲಿ153ನೇ ರ್ಯಾಂಕ್ ಪಡೆದಿದ್ದರು. ಮೈಸೂರಿನಲ್ಲಿದ್ದ ಕರ್ನಾಟಕ ಪೊಲೀಸ್ ಆಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.
ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಪ್ರೊಬೇಷನರಿ ಡಿವೈಎಸ್‌ಪಿಯಾಗಿ ರಿಪೋರ್ಟ್ ಮಾಡಲು ತೆರಳುತ್ತಿದ್ದರು