ಸಕಲೇಶಪುರ : ಸ್ನೇಹಿತರ ಬಳಗದ ವತಿಯಿಂದ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯ ಶ್ರೀ ಎಚ್.ಡಿ ದೇವೇಗೌಡರ ಸಾರ್ವಜನಿಕ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು 29.11.2024 ನೇ ಶುಕ್ರವಾರದಂದು ಏರ್ಪಡಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಹೆತ್ತೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮದಿಂದ ಸುಮಾರು 500ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆ ಹಾಗೂ ಅಧಿಕ ರಕ್ತದ ಒತ್ತಡ ಹಾಗೂ ಮಧುಮೇಹಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಂಡರು. ಇದರಲ್ಲಿ 37ಜನರನ್ನು ನೇತ್ರ ಶಸ್ತ್ರಚಿಕಿತ್ಸೆಗೆ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಎರಡು ದಿನಗಳ ಕಾಲ ನುರಿತ ಕಣ್ಣಿನ ತಜ್ಞರಿಂದ ತಪಾಸಣೆ ನಡೆಸಿ 34 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು.

ಇಂದು ನೇತ್ರ ಶಸ್ತ್ರಚಿಕಿತ್ಸೆ ಅದ ಶಿಬಿರಾರ್ಥಿಗಳು ತಮ್ಮ ಊರಿಗೆ ಶ್ರೀ ಆದಿಚುಂಚನಗಿರಿ ವಾಹನದಲ್ಲಿ ಖುಷಿಯಿಂದ ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ( ಪಿ.ಆರ್. ಓ )ಶಿವಕುಮಾರ್ ಅವರು ” ಆಸ್ಪತ್ರೆಗೆ ಬಂದ ಎಲ್ಲಾ ಶಿಬಿರಾರ್ಥಿಗಳಿಗೂ ಉತ್ತಮ ರೀತಿಯ ವೈದ್ಯಕೀಯ ಸೌಲಭ್ಯದೊಂದಿಗೆ ನುರಿತ ತಜ್ಞರಿಂದ ಲೇಸರ್ ಮುಖಾಂತರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಕಳೆದ ಬಾರಿಯೂ ಈ ಸ್ನೇಹಿತರ ಬಳಗದಿಂದ 40 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಸಿತ್ತು.

ಈ ಬಾರಿ 34 ಜನರಿಗೆ ಯಶಸ್ವಿ ನೇತ್ರ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.ಬಂದ 37 ಶಿಬಿರಾರ್ಥಿಗಳಲ್ಲಿ 3 ಜನರಲ್ಲಿ ಕಣ್ಣಿನ ನರದ ದೋಷ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಇರುವುದರಿಂದ ನೇತ್ರ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿಲ್ಲ. ಪರೀಕ್ಷೆ ಮಾಡಿಸಿಕೊಂಡು ಕನ್ನಡಕವನ್ನು ಉಪಯೋಗಿಸುವ ಮೂಲಕ ಕಣ್ಣಿನ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದು. ಇತರದ ಆಸ್ಪತ್ರೆಯ ಉಚಿತ ಸೇವೆಯು ಇನ್ನಷ್ಟು ಗ್ರಾಮಗಳ ಜನರಿಗೆ ಸಿಗುವಂತಗಲಿ.ಎಂದರು .

ಈ ಸಂದರ್ಭದಲ್ಲಿ ಆಯೋಜಕರಾದ ನಾಗೇಶ್ ಕೆರೆಮನೆ, ಪ್ರಶಾಂತ್,ಇಷ್ಟಾರ್ಥ,ಅರುಣ್ ಗೌಡ ಕರಡಿ ಗಾಲ,ಕೆ.ಎಂ ಪರಮೇಶ್ ಕರಡಿಗಾಲ,ಹೆಚ್.ಬಿ ಹೂವಣ್ಣ ಗೌಡ ಹಿರಿದನಹಳ್ಳಿ,ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳಿದ್ದರು.ನೇತ್ರ ಶಸ್ತ್ರಚಿಕಿತ್ಸೆಗೆ ತೆರಳಿದ ಜೈಶಂಕರ್ ಕಲ್ಲು ತೋಟ ಮಾತನಾಡಿ ನಮಗೆ ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುವ ಮೂಲಕ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಟ್ಟಿದ್ದಾರೆ. ಶ್ರೀ ಆದಿಚುಂಚನಗಿರಿ ಆಸ್ಪತ್ರೆಯವರಿಗೆ ಹಾಗೂ ಸ್ನೇಹಿತರ ಬಳಗದವರಿಗೆ ಧನ್ಯವಾದಗಳು ಎಂದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *