ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಕರಡಿಗಾಲ ಗ್ರಾಮದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಮತ್ತು ಶ್ರಿ ಕನ್ನಂಬಾಡಿಯಮ್ಮನವರ ಸುಗ್ಗಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಇಂದು ಮಲ್ಲು ಸುಗ್ಗಿ ಕುಣಿತ ಮಾಡುವುದರೊಂದಿಗೆ ಸುಗ್ಗಿ ಪ್ರಾರಂಭವಾಯಿತು. ಗ್ರಾಮದ ಜನರು ಹಾಗೂ ಸುತ್ತಮುತ್ತ ಹಳ್ಳಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸುಗ್ಗಿಯ ಉತ್ಸವಕ್ಕೆ ಕಾರಣಕರ್ತರಾದರು. ಮಲ್ಲು ಸುಗ್ಗಿಯು ನೆರೆದಿದ್ದವರ ಹರ್ಷೋದ್ಧಾರಕ್ಕೆ ಕಾರಣವಾಯಿತು.ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಪೂರ್ತಿ ಸುಗ್ಗಿ ಕುಣಿತ ಇದ್ದು.ನಾಳೆ ಬೆಳಗ್ಗೆ ವಿಶೇಷ ಬಿಲ್ಲು ಸುಗ್ಗಿ ಕುಣಿತ,ಹಣ್ಣು ಕಾಯಿ ,ಹರಕೆ ತೀರಿಸುವುದು, ಮಡಲಕ್ಕಿ ಸಮರ್ಪಣೆ, ಕೆಂಡೋತ್ಸವ ನೆಡೆಯುವುದು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *