ಸಕಲೇಶಪುರ

ತಾಲ್ಲೂಕು ಹೆತ್ತೂರು ಹೋಬಳಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಇಂದು ತಾಲ್ಲೂಕು ಒಕ್ಕಲಿಗರ ಸಂಘ ಮತ್ತು ಹೋಬಳಿ ಒಕ್ಕಲಿಗರ ಸಂಘದ “ಜಂಟಿ ಸಭೆ” ನಡೆಸಲಾಯಿತು. ತಾಲೂಕಿನದ್ಯಂತ ಬಂದಿದ್ದ ಸಂಘದ ನಿರ್ದೇಶಕರು ಹಾಗೂ ಒಕ್ಕಲಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದ ಮುಂದಿನ ಆರು ಮುಖ್ಯ ನಿರ್ಣಯಗಳಿಗೆ ಅನುಮೋದನೆ ತರುವಲ್ಲಿ ಸಮ್ಮತಿಸಿದರು.

ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರ ಹಾಗೂ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್ ಎಂ ವಿಶ್ವನಾಥ್ ಮಾತನಾಡಿ ಒಕ್ಕಲಿಗರ ಸಂಘದ ಬೆಳೆದು ಬಂದ ಹಾದಿ ಹಾಗೂ ಮುಂದೆ ಸಂಘ ಮಾಡಬೇಕಾದ ಕೆಲಸ ಬಗ್ಗೆ ಹೇಳುತ್ತ , “ತಾಲೂಕಿನ ಎಲ್ಲಾ ಒಕ್ಕಲಿಗರು ಒಗ್ಗಟ್ಟಾಗಬೇಕು .ಆ ನಿಟ್ಟಿನಲ್ಲಿ ಸಕಲೇಶಪುರ ಪಟ್ಟಣದಲ್ಲೊಂದು ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವುದರ ಜೊತೆಗೆ ಜನಾಂಗ ಎಷ್ಟು ಬಲಿಷ್ಠವಾಗಿದೆ ಎಂದು ಎಚ್ಚರಿಕೆಯ ಗಂಟೆಯಂತಿರುವಂತೆ ಮಾಡಬೇಕು . ಸಂಘವನ್ನು ಹುಟ್ಟುಹಾಕುವುದು ಮಾತ್ರವಲ್ಲ ಅದನ್ನು ಬಲಿಷ್ಠವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕು.”ಎಂದು ಕರೆಕೊಟ್ಟರು.

ಸಭೆಯಲ್ಲಿ ಒಕ್ಕಲಿಗರ ಸಮುದಾಯಕ್ಕಾಗಿ 6 ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು.

  1. ತಾಲೂಕು ಒಕ್ಕಲಿಗರ ಸಂಘದ ಮತ್ತು ಹೋಬಳಿ ಒಕ್ಕಲಿಗರ ಸಂಘದ ಒಳನಾಟ ಮತ್ತು ಬಾಂಧವ್ಯದ ವೃದ್ಧಿಯ ಬಗ್ಗೆ.
  2. ತಾಲೂಕು ಸಂಘದ ವತಿಯಿಂದ ಪ್ರಾರಂಭ ಮಾಡುತ್ತಿರುವ ಹಾಸ್ಟೆಲ್ ಬಗ್ಗೆ,
  3. ತಾಲೂಕು ಸಂಘದ ವತಿಯಿಂದ ಸಹಕಾರ ಸಂಘವನ್ನು ಸ್ಥಾಪನೆ ಮಾಡುವ ಬಗ್ಗೆ,
  4. ತಾಲೂಕು ಒಕ್ಕಲಿಗರ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಣಿ ಮಾಡುವ ಬಗ್ಗೆ,
  5. ಕೆಂಪೇಗೌಡ ಯುವ ವೇದಿಕೆಯನ್ನು ಹೋಬಳಿ ಮಟ್ಟದಲ್ಲಿ ಬಲಪಡಿಸುವ ಬಗ್ಗೆ,ಹಾಗೂ
  6. ಹೋಬಳಿ ಮಟ್ಟದಲ್ಲಿ ಸಮುದಾಯದ ವಾಟ್ಸಪ್ ಗ್ರೂಪ್ ಗಳನ್ನು ಮಾಡುವ ಬಗ್ಗೆ ಚರ್ಚೆ ಮಾಡಿ ಬಂದ ಸದಸ್ಯರು ಕೈ ಎತ್ತಿ ಅನುಮತಿ ಸೂಚಿಸುವ ಮೇರೆಗೆ ನಿರ್ಣಯ ತೆಗೆದುಕೊಳ್ಳಲಾಯಿತು.ಸಭೆಯಲ್ಲಿ 2500 ಶೇರಿನ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದೆಂದು ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಹೆತ್ತೂರು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಧ ಕೃಷ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮರಗುತ್ತುರು ಉಮೇಶ್ ,ಉಪಾಧ್ಯಕ್ಷರಾದ ನಂದಿಕೃಪ ,ಮಾಗೇರಿ ರಾಜಣ್ಣ , ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು, ಕೊಣಮನಹಳ್ಳಿ ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಉಜ್ಮಾರುಜ್ಮಿಸುದರ್ಶನ್ , ಅಜಿತ್, ಅರವಿಂದ್,ಮಾಜಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಗೊದ್ದು ಸುಬ್ರಹ್ಮಣ್ಯ, ಕಾಗಿನಹರೆ ದೇವಸ್ಥಾನದ ಯಕ್ಷರಾದಗುಂಡುರಾಜ್ಹೆ ಚ್ ಡಿ ಪಿ ಎ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ, ಕೊತ್ತನಹಳ್ಳಿ ತಮ್ಮಣ್ಣ , ಯಡಕೇರೆ ಗಂಗಣ್ಣ, ನಿವೃತ್ತ ತಹಶಿಲ್ದಾರ್ ಅಣ್ಣೆಗೌಡ, ವಳಲಹಳ್ಳಿ ರಾಜೇಗೌಡರು, ಹೋಬಳಿ ಉಪಾಧ್ಯಕ್ಷರಾದ ರಮೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *