ಬೇಲೂರು : ಇಲ್ಲಿನ ಚನ್ನಕೇಶವ ದೇಗುಲದ ರಾಜ ಗೋಪುರಕ್ಕೆ ಕಳೆದ ಎರಡು ತಿಂಗಳ ಹಿಂದೆ ಸಿಡಿಲು ಬಡಿದು ಕಳಸದ ಬಳಿ ಗೋವಿನ ಕೊಂಬಿನಕಾರದ ತುದಿ ಜಖಂಗೊಂಡಿದ್ದ ಹಿನ್ನಲೆ ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಶಾಸಕರ ನೇತೃತ್ವದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಶುದ್ಧೀಕರಣ ನೆರವೇರಿಸಲಾಯಿತು.
ದೇಗುಲದ ಆಗಮಿಕ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ನರಸಿಂಹ ಭಟ್ಟರ್ ನೇತೃತ್ವದಲ್ಲಿ ವಿವಿಧ ಅಭಿಷೇಕ, ಹೊಮ ಹವನ ನಡೆಸಲಾಯಿತು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಸಿಡಿಲು ಬಡಿದು ಭಿನ್ನವಾಗಿದ್ದ ಗೋಪುರಕ್ಕೆ ಶುದ್ಧಿ ಕಾರ್ಯ ನಡೆಸಿಲ್ಲ ಎಂದು ಭಕ್ತರ ಅಸಮಾಧಾನ ಹೊಂದಿದ್ದರು. ಆದ್ದರಿಂದ ಇಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ನಡೆಸಲಾಗಿದೆ. ವರುಣನ ಆಗಮನಕ್ಕಾಗಿ ಸಂಕಲ್ಪ ಮಾಡಿದ್ದೇವೆ’ ಎಂದರು.
ಈ ಸಂದರ್ಭದಲ್ಲಿ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ . ನಾರಾಯಣಸ್ವಾಮಿ, ತಹಶೀಲ್ದಾರ್ ಎಂ.ಮಮತ, ಸಮಿತಿ ಸದಸ್ಯರಾದ ರವಿಶಂಕರ್, ರವೀಂದ್ರ, ವಿಜಯಲಕ್ಷ್ಮಿ, ಪ್ರಮೋದ್, ಪುರಸಭಾ ಸದಸ್ಯ ಶ್ರೀನಿವಾಸ್ ಇದ್ದರು.