ಹಾಸನ : ಹದಿಮೂರನೆಯ ರಾಷ್ಟ್ರೀಯ ಹಾಕಿಯ ಜೂನಿ ಯರ್ ಬಾಲಕಿಯರ ಪಂದ್ಯಾ ವಳಿಯು ಒಡಿಶಾದ ರೂರ್ಕೆ ಲಾದಲ್ಲಿ ಆಯೋಜನೆ ಗೊಂಡಿದ್ದು, ಪ್ರಸಕ್ತ ಪಂದ್ಯಾವ ಳಿಯು ಇದೇ ಜೂನ್ ೨೭ ರಂದು ಆರಂಭಗೊಂಡಿದ್ದು, ಜುಲೈ ತಿಂಗಳ ಏಳರತನಕ ನಡೆಯಲಿದೆ
ಈ ಮಹತ್ವದ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯವರೂ ಮತ್ತು ಹಾಸನ ಕ್ರೀಡಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಜಿಲ್ಲೆಯ ಹೆಮ್ಮೆಯ ಆರು ಜನ ಕ್ರೀಡಾಪಟುಗಳು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಕೂಟದಲ್ಲಿ ಭಾಗವಹಿಸಿರುವುದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ಸಂಗತಿ.
ಜಿಲ್ಲಾ ಹಾಕಿ ತರಬೇತುದಾರರಾದ ಹೆಚ್.ಬಿ. ರವೀಶ್ ಅವರ ಸಮರ್ಥ ಮಾರ್ಗದರ್ಶನ ಹಾಗೂ ಕಠಿಣ ತರಬೇತಿ, ಶ್ರಮದ ಫಲವಾಗಿ ರೂಪುಗೊಂಡ ಆರೂ ಜನ ವಿದ್ಯಾರ್ಥಿನಿಯರು ಪ್ರಸ್ತುತ ಮೈಸೂರಿನ ಕ್ರೀಡಾನಿಲಯದಲ್ಲಿ ಅಭ್ಯಾಸ ಮುಂದುವರೆಸಿದ್ದಾರೆ. ಕರ್ನಾಟಕ ತಂಡದ ಆರು ಜನ ಎಂದರೆ ತಂಡರ ಮೂರನೆಯ ಒಂದು ಭಾಗದಷ್ಟು ಹಾಸನ ಜಿಲ್ಲೆಯವರೇ ಇರುವುದು ವಿಶೇಷವಾಗಿದೆ.
ಕರ್ನಾಟಕ ತಂಡದ ನಾಯಕತ್ವವನ್ನು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಮಾರಿ ಸಹನಾ ವಹಿಸಿಕೊಂಡಿದ್ದರೆ ಸಹ ಆಟಗಾರ್ತಿ ಯರಾಗಿ ಯಮುನಾ, ವಿದ್ಯಾಶ್ರೀ, ಮಾನಸ, ಚತುರ್ಥಿ ಮತ್ತು ಗೋಲ್ ಕೀಪರ್ ಆಗಿ ವಿದ್ಯಾಶ್ರೀ ಭಾಗವಹಿಸಿದ್ದಾರೆ.
ಈ ಆರೂ ಜನ ಸೇರಿದಂತೆ ಕರ್ನಾಟಕ ತಂಡ ಪಾಲ್ಗೊಂಡ ಮೊದಲ ಪಂದ್ಯದಲ್ಲೇ ಜಮ್ಮು ಕಾಶ್ಮೀರ ತಂಡದ ವಿರುದ್ಧ ೧೩ / ೧ ಅಂತದರದಲ್ಲಿ ಭರ್ಜರಿ ವಿಜಯವನ್ನು ಸಾಧಿಸಿ ಹೆಮ್ಮೆಯಿಂದ ಬೀಗಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಪ್ರಬಲ ಪಾಂಡಿಚೇರಿ ಹಾಗೂ ಮಧ್ಯ ಪ್ರದೇಶ ತಂಡಗಳ ವಿರುದ್ಧ ಸೆಣಸಬೇಕಿದೆ. ಲೀಗ್ ಹಂತದಲ್ಲಿ ಪ್ರಬಲ ಸ್ಪರ್ಧೆ ಒಡ್ಡಿ ನಾಕೌಟ್ ಹಂತ ತಲುಪುವ ಗುರಿ ಹೊಂದಿದ ತಂಡವು ಆ ಮಟ್ಟಿಗಿನ ಭರವಸೆ ಮೂಡಿಸಿದೆ. ಪ್ರಸಕ್ತ ನಡೆಯುತ್ತಿರುವ ಪಂದ್ಯಾ ವಳಿಯಲ್ಲಿ ತಮ್ಮೆಲ್ಲ ಸಾಮರ್ಥ್ಯವನ್ನು ಪ್ರಯೋಗಿಸಿ ಮುನ್ನೆಡೆದು ಸಾಧನೆ ತೋರಿದರೆ ರಾಷ್ಟ್ರಮಟ್ಟದ ಜೂನಿಯರ್ ತರಬೇತಿ ಶಿಬಿರಕ್ಕೆ ಆಯ್ಕೆಯಾಗುವ ಅವಕಾಶ ಹೆಚ್ಚಾಗಿದೆ. ಜಿಲ್ಲೆಯ ಹೆಮ್ಮೆಯ ಈ ೬ ಜನ ಕ್ರೀಡಾಳುಗಳು ಅತ್ಯುತ್ತಮ ಪ್ರದರ್ಶನ ನೀಡಿ, ರಾಜ್ಯ ತಂಡಕ್ಕೆ ಆಯ್ಕೆ ಆದಂತೆಯೇ ರಾಷ್ಟ್ರೀಯ ಜೂನಿಯರ್ ಹಾಕಿ ತರಬೇತಿ ಶಿಬಿರಕ್ಕೂ ಆಯ್ಕೆಯಾಗಿ, ಅದರಲ್ಲೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂಬುದು ಹಾಸನ ಜಿಲ್ಲಾ ಕ್ರೀಡಾಧಿಕಾರಿಗಳಾದ ಸಿ.ಕೆ. ಹರೀಶ್, ಜಿಲ್ಲೆಯ ತರಬೇತುದಾರರಾದ ಹೆಚ್.ಬಿ. ರವೀಶ್ ಹಾಗೂ ಜಿಲ್ಲೆಯ ಎಲ್ಲಾ ಹಾಕಿ ಕ್ರೀಡಾಪಟುಗಳ ಮತ್ತು ಕ್ರೀಡಾ ಪ್ರೇಮಿಗಳ ಹಂಬಲವಾಗಿದೆ.