ಸಕಲೇಶಪುರ :- ನಗರದ ಹೊಸ ಬಸ್ ಸ್ಟಾಂಡ್ ಮುಂಬಾಗದಲ್ಲಿರುವ ವೀರ ಯೋಧ ಸಾಗರ್ ಪುತ್ಥಳಿ ಮುಂದೆ ಸಾಗರ್ ಕುಟುಂಬದ ಸದಸ್ಯರು, ನಾಡ ಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ವೇದಿಕೆ ,ಎ ಕೆ ಸಾಗರ್ ಸೇವಾ ಟ್ರಸ್ಟ್ ಮಾರನಹಳ್ಳಿ ಮತ್ತು ವಿವಿಧ ಸಂಘಟನೆಗಳಾದ ,ರೊಟರಿ ಸಂಸ್ಥೆ, ವಿಶ್ವಕರ್ಮ, ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಇಂದು ಹುತಾತ್ಮ ವೀರ ಯೋಧ ಎ ಕೆ ಸಾಗರ್ ರವರ ಪ್ರತಿಮೆಗೆ ಹಾರ ಹಾಕುವ ಮೂಲಕ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಸಕಲೇಶಪುರ ತಾಲ್ಲೂಕು ಆಡಳಿತ ಸುಮಾರು ಐದು ಎಕರೆಯಲ್ಲಿ ವೀರ ಯೋಧರ ಸ್ಮಾರಕ ಮಾಡಿ ಅವರ ಹೋರಾಟ ಬಲಿದಾನದ ಬಗ್ಗೆ ಮುಂದಿನ ಪೀಳಿಗೆಗೆ ಶಾಸ್ವತವಾಗಿ ನೆನಪಿನಲ್ಲಿ ಇರುವಂತೆ ಕೆತ್ತನೆಯ ಮೂಲಕ ಅವರ ಜೀವನ ಚರಿತ್ರೆ ಹೋರಾಟದ ಬಗ್ಗೆ ಮತ್ತು ಆ ಸ್ಥಳದಲ್ಲೇ ಸು ಸಜ್ಜಿತ ಉದ್ಯಾನ ವನ ನಿರ್ಮಾಣ ಮಾಡಬೇಕು ಎಂದು ರೋಟರಿ ಸಂಸ್ಥೆಯ ಕಾರ್ಯದರ್ಶಿ ಜಾನಕೇರಿ ಪರಮೇಶ್ ಹೇಳಿದರು.

ನಂತರ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಬೀಮ್ ಮಂಜುನಾಥ್ ಸಾಗರ್ ರವರು ದೇಶಕ್ಕಾಗಿ ಬಲಿದಾನ ಮಾಡಿದ ಸಂದರ್ಭದಲ್ಲಿ ಸಾವಿರಾರು ಜನರು ವಿವಿಧ ರಾಜಕೀಯ ಮುಖಂಡರುಗಳು ಸೇರಿ ಬಾಷಣ ಮಾಡಿದ್ದು ಬಿಟ್ಟರೆ ವಿನಃ ಯಾರು ಇತ್ತೀಚಿಗೆ ವೀರ ಯೋಧ ಸಾಗರ್ ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು ಇನ್ನೂ ಮುಂದಾದರು ಇಂತಹ ವ್ಯಕ್ತಿಗಳ ಜನ್ಮದಿನ, ಹುತಾತ್ಮ ದಿನಾಚರಣೆಗಳನ್ನು ಸ್ಥಳೀಯ ಮತ್ತು ಜಿಲ್ಲಾ ಆಡಳಿತದ ವತಿಯಿಂದ ಅದ್ದೂರಿಯಾಗಿ ಆಚರಿಸಬೇಕು ಎಂದರು.

ಮಾರನ ಹಳ್ಳಿಯಲ್ಲಿ ಇರುವ ಸಾಗರ್ ಸಮಾಧಿ ಸ್ಥಳದಲ್ಲಿ ಮಾಡಲು ಉದ್ದೇಶಿಸಿರುವ ಸಾಗರ್ ಪ್ರತಿಮೆಗೆ ಮತ್ತು ಉದ್ಯಾನವನಕ್ಕೆ ಸ್ಥಳ ಮತ್ತು ಸಹಾಯಧನ ಕೊಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಸಹಕಾರ ಮಾಡದೆ ಇರುವುದನ್ನು ನೋಡಿದರೆ ಅಧಿಕಾರಿಗಳು, ರಾಜಕಾರಣಿಗಳಿಗೆ ವೀರ ಯೋಧರ ಬಗ್ಗೆ ಆಸಕ್ತಿ ಇಲ್ಲಾ ಹಾಗೂ ನಮ್ಮ ಟ್ರಸ್ಟ್ ವತಿಯಿಂದ ಹಲವಾರು ಬಾರಿ ಸರ್ಕಾರಕ್ಕೆ ಜಿಲ್ಲಾ ಆಡಳಿತಕ್ಕೆ, ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರು ಯಾವ ಪ್ರಯೋಜನ ಆಗಿಲ್ಲ ಎಂದು ಎ ಕೆ ಸಾಗರ್ ಸೇವಾ ಟ್ರಸ್ಟ್ ನಿರ್ದೇಶಕ ಹಾಗೂ ಸಾಗರ್ ಸಹಪಾಠಿ ಕಡಗರಹಳ್ಳಿ ಅಶೋಕ್ ಹೇಳಿದರು.

ಈ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಸಾಗರ್ ಅಣ್ಣ ಸಂಜಯ್ ಮತ್ತು ಅವರ ಪತ್ನಿ ,ಪುತ್ರಿ, ಒಕ್ಕಲಿಗರ ಸಂಘದ ನಿರ್ದೇಶಕ ವಳಲಹಳ್ಳಿ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ನಲ್ಲುಲಿ ಸತೀಶ್, ವಿಶ್ವಕರ್ಮ ಸಮಾಜದ ರವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾನಂದ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಪತಾಂಜಲಿ ಯೋಗ ಟ್ರಸ್ಟ್ ನ ಸಂಗಮೇಶ್, ಎ ಕೆ ಸಾಗರ್ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ಪೂರ್ಣೇಶ್, ಒಕ್ಕಲಿಗರ ಸಂಘದ ವ್ಯವಸ್ಥಾಪಕ ಎನ್ ಬಿ ರಮೇಶ್, ಕೆಂಪೇಗೌಡ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿಶಾಲ್ ಗೌಡ, ಕಾರ್ಯದರ್ಶಿ ರಾಘವೇಂದ್ರ, ಸದಸ್ಯರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *