ಸಕಲೇಶಪುರ:- ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯು ಕುತೂಹಲ ಮೂಡಿಸಿತ್ತು.
ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದು, ಈ ಗ್ರಾಮ ಪಂಚಾಯಿತಿ ಸಾಮಾನ್ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಾಮಾನ್ಯ ಮಹಿಳೆಗೆ ಬಂದಿತ್ತು. ಅಧ್ಯಕ್ಷರ ಸ್ಥಾನಕ್ಕೆ ಮೂರು ಜನ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಎರಡು ಜನ ನಾಮಪತ್ರ ಸಲ್ಲಿಸಿದ್ದರು.
ಬ್ಯಾಕರವಳ್ಳಿ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 5 ಹಾಗೂ ಕಾಂಗ್ರೆಸ್ ಬೆಂಬಲಿತ 5 ಹಾಗೂ ಜೆಡಿಎಸ್ ಬೆಂಬಲಿತ 2 ಜನ ಸದಸ್ಯರು ಇದ್ದರು. ಅತ್ಯಂತ ಕುತೂಹಲ ಕೆರಳಿಸಿದ್ದ ,ಯಾವುದೆ ಆಸೆ ಆಮಿಷಗಳಿಗೆ ಒಳಗಾಗದೆ ಸದಸ್ಯರು ಅಭಿರುದ್ದಿ ದೃಷ್ಟಿಯಿಂದ ಜೆಡಿಎಸ್ ಬೆಂಬಲಿತ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬೆಂಬಲ ಕೊಡುವುದರೊಂದಿಗೆ ಅಧ್ಯಕ್ಷರ ಸ್ಥಾನವನ್ನು ಸುಳ್ಳಕ್ಕಿ ಗ್ರಾಮದ ಸದಸ್ಯರಾದ ರಂಗನಾಥ್ ಶೆಟ್ರು ಪಾಲಾಯಿತು.
ಜೆಡಿಎಸ್ ಬೆಂಬಲಿತ ಕಾಮನಹಳ್ಳಿ ಭಾಗ್ಯ ಅವರಿಗೆ ಉಪಾಧ್ಯಕ್ಷ ಒಲಿದು ಬಂತು. ಸಕಲೇಶಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಚುನಾವಣೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರದ ಮುರುಳಿ ಮೋಹನ್, ಸೇರಿದಂತೆ ತಾಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ.ಪಿ ಕೃಷ್ಣೇಗೌಡ, ಸ್ಥಳಿಯ ಕಾಂಗ್ರೇಸ್ ನಾಯಕರಾದ ಬಿ. ಟಿ.ಕಿರಣ್, ಕೆ.ಡಿ ಮಂಜುನಾಥ್ ಶುಕ್ರವಾರ ಸಂತೆ ಸದಸ್ಯರಾದ ಅರ್ಜುನ್ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾದರು.