ಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ವಿವರ ನೋಡಿ.ಆಕಾಸದ ಅರ್ಧ ನಕ್ಷತ್ರಗಳು ನಾವು, ಸಿಡಿದರೆ ಬೆಂಕಿಯ ಕಿಡಿಗಳಾಗುವೆವು – ಇದು ಮಹಿಳಾ ಚಳವಳಿಯ ಜನಪ್ರಿಯ ಘೋಷಣೆ. ರಾಜ್ಯದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ ಎಂಬ ಅಂಕಿ ಅಂಶಗಳನ್ನು ನೋಡಿದರೆ ನಿರಾಸೆ ಕಾಡುತ್ತದೆ. ಏಕೆಂದರೆ ಮಹಿಳೆಯರಿಗೆ ಟಿಕೆಟ್ ನೀಡಲು ಮೂರು ಪ್ರಮುಖ ಪಕ್ಷಗಳು ಹಿಂದೇಟು ಹಾಕಿವೆ. ಇನ್ನು ಆಮ್ ಆದ್ಮಿ ಪಕ್ಷ 20 ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಇರುವ ಪಕ್ಷಗಳಲ್ಲಿಯೇ ಉತ್ತರ ಸಾಧನೆ ಮಾಡಿದೆ. ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ ಎಂಬುದರ ಡೀಟೈಲ್ಸ್ ಇಲ್ಲಿದೆ.ಬಿಜೆಪಿ: 11ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರಲ್ಲಿ 11 ಮಹಿಳೆಯರಿಗೆ ಟಿಕೆಟ್ ನೀಡಿದೆ.ನಿಪ್ಪಾಣಿ: ಶಶಿಕಲಾ ಜೊಲ್ಲೆಸವದತ್ತಿ ಯಲ್ಲಮ್ಮ: ರತ್ನ ವಿಶ್ವನಾಥ್ ಮಾಮನಿಗುರುಮಠಕಲ್: ಲಲಿತಾ ಅನಾಪುರ್‌ಕೊಪ್ಪಳ: ಮಂಜುಳಾ ಅಮರೇಶ್ ಕರಡಿಕಾರವಾರ : ರೂಪಾಲಿ ನಾಯ್ಕ್‌ಹಿರಿಯೂರು: ಪೂರ್ಣಿಮಾ ಶ್ರೀನಿವಾಸ್‌ಕೆಜಿಎಫ್: ಅಶ್ವಿನಿ ಸಂಪಂಗಿಮಹದೇವಪುರ: ಮಂಜುಳಾ ಅರವಿಂದ್ ಲಿಂಬಾವಳಿನಾಗಮಂಗಲ: ಸುಧಾ ಶಿವರಾಮೇಗೌಡಪುತ್ತೂರು: ಆಶಾ ತಿಮ್ಮಪ್ಪಸುಳ್ಯ : ಭಾಗೀರಥಿ ಮುರುಳ್ಯಕಾಂಗ್ರೆಸ್: 12ಪ್ರತಿಪಕ್ಷ ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ಅದರಲ್ಲಿ 12 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ.ಬೆಳಗಾವಿ ಗ್ರಾಮೀಣ: ಲಕ್ಷ್ಮೀ ಹೆಬ್ಬಾಳ್ಕರ್ಬೆಳಗಾವಿ ದಕ್ಷಿಣ: ಪ್ರಭಾವತಿ ಮಾಸ್ತಮರ್ಡಿಖಾನಪುರ: ಅಂಜಲಿ ನಿಂಬಾಳ್ಕರ್ಗುಲ್ಬರ್ಗ ಉತ್ತರ: ಕನೀಝ್ ಪತಿಮಾದೇವದುರ್ಗ: ಶ್ರೀದೇವಿ ಆರ್.ನಾಯಕ್ಶಿರಹಟ್ಟಿ: ಸುಜಾತ ಎನ್ ದೊಡ್ಡಮನಿಕುಂದಗೋಳ: ಕುಸುಮವತಿ ಶಿವಳ್ಳಿಕುಮಟ: ನಿವೇದಿತ್ ಆಳ್ವಮೂಡಿಗೆರೆ: ನಯನ ಜ್ಯೋತಿಕೆಜಿಎಫ್: ರೂಪಕಲಾ ಎಂ.ರಾಜರಾಜೇಶ್ವರಿ ನಗರ: ಎಚ್.ಕುಸುಮಾಜಯನಗರ: ಸೌಮ್ಯ ರೆಡ್ಡಿಜೆಡಿಎಸ್ – 13ಮತ್ತೊಂದು ಪ್ರತಿಪಕ್ಷ ಜೆಡಿಎಸ್ 208 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 13 ಮಹಿಳೆಯರಿಗೆ ಟಿಕೆಟ್ ನೀಡಿದೆ.ಕಿತ್ತೂರು: ಅಶ್ವಿನಿ ಪೂಜೇರ್ಸಿಂದಗಿ: ವಿಶಾಲಾಕ್ಷಿ ಶಿವಾನಂದಆಳಂದ: ಮಹೇಶ್ವರಿ ವಾಲೆದೇವದುರ್ಗ: ಕರೆಮ್ಮಾ ಜಿ ನಾಯಕ್ಕಾರವಾರ: ಚೈತ್ರಾ ಕೋಟಕಾರ್ಬ್ಯಾಡಗಿ: ಸುನೀತಾ ಎಂ ಪೂಜಾರ್ಶಿವಮೊಗ್ಗ ಗ್ರಾಮೀಣ: ಶಾರಾದ ಪೂರ್ಯ ನಾಯಕ್ಭದ್ರಾವತಿ: ಶಾರದ ಅಪ್ಪಾಜಿಗೌಡಕಾಪು: ಸಬೀನಾ ಸಮದ್ಪುಲಿಕೇಶಿನಗರ: ಅನುರಾಧಮೂಡಬಿದರೆ: ಅಮರಶ್ರೀಮಂಗಳೂರು ನಗರ ದಕ್ಷಿಣ: ಸುಮತಿ ಹೆಗಡೆಪುತ್ತೂರು: ದಿವ್ಯಾಪ್ರಭಾಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 199 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 13 ಮಹಿಳೆಯರಿಗೆ ಟಿಕೆಟ್ ನೀಡಿದೆ.ಆಮ್ ಆದ್ಮಿ ಪಕ್ಷವು 212 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು 20 ಮಹಿಳೆಯರಿಗೆ ಟಿಕೆಟ್ ನೀಡಿದೆ. ಆ ಮೂಲಕ ಅತಿ ಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡಿದ ಪಕ್ಷ ಎನಿಸಿಕೊಂಡಿದೆ.