ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಮಾಸಿಕ ಸಭೆ ನಡೆಯಿತು. ಸಕಲೇಶಪುರ : ಕರ್ನಾಟಕ ಬೆಳೆಗಾರರ ಒಕ್ಕೂಟ,ಹಾಸನ ಜಿಲ್ಲಾ ಪ್ಲಾಂಟರ್ಸ್ ಕ್ಲಬ್ ಹಾಗೂ ಹೆತ್ತೂರು ಹೋಬಳಿ ಬೆಳೆಗಾರರ ಸಂಘ ಹೆತ್ತೂರು.ಇಂದು ಬೆಳೆಗಾರರ ಸಂಘದ ಮಾಸಿಕ ಸಭೆ ಅಧ್ಯಕ್ಷರಾದ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಲಾಯಿತು.ಅಲ್ಲದೆ ಈ ಭಾಗದ ರೈತರ ಸಮಸ್ಯೆ ಬಗ್ಗೆ ಚರ್ಚಿ ಮಾಡುವ ಜೊತೆಗೆ .ರೈತರಿಗೆ ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಯಾವ ರೀತಿ ಬೆಳಗಾರರ ಸಂಘ ಒಗ್ಗಟ್ಟಾಗಿರಬೇಕು ಎಂಬುದರ ಬಗ್ಗೆ ಬಂದ ಬೆಳೆಗಾರರಿಗೆ ಮಾಹಿತಿ ನೀಡಲಾಯಿತು.ಸಭೆಯಲ್ಲಿ 1)ಅರಣ್ಯ ಇಲಾಖೆಯಿಂದ ಬೆಳೆಗಾರರಿಗಾಗುತ್ತಿರುವ ಸಮಸ್ಯೆಗಳು.2) ಫೋಲೀಸ್ ಸ್ಟೇಷನ್ ನಲ್ಲಿ ಬಂದೂಕು ಜಮೆ ಮಾಡುತ್ತಿರುವ ಬಗ್ಗೆ3 )ಹೆತ್ತೂರು ಹೋಬಳಿ ಬೆಳೆಗಾರರ ಸಂಘದಲ್ಲಿ ಮಾಜಿ ಅಧ್ಯಕ್ಷರ ಅವಧಿಯಲ್ಲಾದ ಲೆಕ್ಕ ಪತ್ರ ಮಂಡನೆ.4) ಗ್ರಾಮ ಪಂಚಾಯಿತಿ ಮಟ್ಟದ ಸಂಘಟನೆಗಳು ಹೋಬಳಿ ಬೆಳೆಗಾರರ ಸಂಘದ ಜೊತೆಗೆ ಕೈ ಜೋಡಿಸುವ ಬಗ್ಗೆ ಮಾರ್ಗದರ್ಶನ.5) ಜಿಲ್ಲಾಧಿಕಾರಿಗಳು ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್ ರವರ ಬಂದೂಕನ್ನು ಎರಡು ವರ್ಷಗಳ ಕಾಲ ಅಮಾನತ್ತು ಮಾಡಿರುವ ಬಗ್ಗೆ ಖಂಡನೆ. 6)ಹೊಸಹಳ್ಳಿ ಗ್ರಾಮದಲ್ಲಿ ಕಾಫಿ ತೋಟ ಸುಟ್ಟು ನಾಶವಾಗಿದ್ದು .ನಷ್ಟ ವಾಗಿರುವ ಬೆಳೆಗಾರರಿಗೆ ಪರಿಹಾರ ದೊರಕಿಸುವ ಬಗ್ಗೆ.7) ಕಾರ್ಬನ್ ಕ್ರೆಡಿಟ್ ಹಣ ಬೆಳೆಗಾರರಿಗೆ ದೊರಕಿಸಲು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಪ್ರಯತ್ನದ ಬಗ್ಗೆ.ಚರ್ಚಿಸಲಾಯಿತು.ಸಭೆಯಲ್ಲಿ ಹೋಬಳಿ ಅಧ್ಯಕ್ಷರಾದ ದೇವರಾಜು,ಮಾಜಿ ಅಧ್ಯಕ್ಷರು ಸಚಿನ್,ಉಪಾಧ್ಯಕ್ಷರಾದ ಉದಯ್, ಶ್ರೀಧರ್ ಹೆತ್ತೂರುನಿರ್ದೇಶಕರು ಕರ್ನಾಟಕ ಬೆಳೆಗಾರರ ಒಕ್ಕೂಟ, ಖಜಾಂಚಿ ಮಧು ಕೆ ಎಲ್, ಹಾಗೂ ಹೋಬಳಿ ಮಟ್ಟದ ಬೆಳೆಗಾರರ ಸಂಘದ ಪದಾಧಿಕಾರಿಗಳು ಅತಿ ಹೆಚ್ಚು ಮಟ್ಟದಲ್ಲಿ ಭಾಗವಹಿಸಿ ಯಶಸ್ವಿ ಗಿಸಿದರು.