ಸಕಲೇಶಪುರ : ಪಟ್ಟಣಕ್ಕೆ ಅನತಿ ದೂರದಲ್ಲಿರುವ ಕೌಡಳ್ಳಿ ಗ್ರಾಮದ ತೋಟವೊಂದರಲ್ಲಿ ಇಂದು ಬೆಳಗ್ಗೆಯಿಂದ ಭೀಡುಬಿಟ್ಟಿರುವ ಸುಮಾರು 13 ಕ್ಕೂ ಹೆಚ್ಚು ಕಾಡಾನೆಗಳು

ಸಂಜೆಯಾದರೂ ಬೀಡುಬಿಟ್ಟಿರುವ ಜಾಗವನ್ನು ಬಿಟ್ಟು ಕದಲದೆ ಕಾಫಿ ತೋಟದ ಬೇಲಿಯ ಬದಿಯಲ್ಲಿ ನಿಂತು ಬಾಲ ಅಲ್ಲಾಡಿಸುತ್ತ ರಸ್ತೆಯಲ್ಲಿ ನಿಂತು ನೋಡುವ ಸಾರ್ವಜನಿಕರಿಗೆ ಆತಂಕದ ಜೊತೆ ಮನರಂಜನೆ ನೀಡಿದವು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರಾದರೂ ಆನೆಗಳು ಜಾಗ ಬಿಟ್ಟು ಕದಲದೆ ಇರುವುದು ಕೌಡಳ್ಳಿ ಗ್ರಾಮಸ್ಥರಿಗೆ ಆತಂಕ ಮೂಡಿಸಿವೆ.*ಅರಣ್ಯ ಇಲಾಖೆಯ ಸೂಚನೆ* ಕೌಡಳ್ಳಿ ಗ್ರಾಮದ ಭಾಸ್ಕರ್ ನಾಯ್ಡು ಅವರ ಮನೆಯ ಮೇಲ್ಬಾಗದಲ್ಲಿರುವ ಕಾಫಿತೋಟವೊಂದರಲ್ಲಿ ಆನೆಗಳು ಗುಂಪು ಗುಂಪಾಗಿ ಬೀಟುಬಿಟ್ಟಿದ್ದು ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಬಾರದೆಂದು ಹಾಗೂ ಮನೆಯಿಂದ ರಾತ್ರಿ ಸಮಯದಲ್ಲಿ ಹೊರಗಡೆ ಬರಬಾರದೆಂದು ವಿನಂತಿ ಮಾಡಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed