ಸಕಲೇಶಪುರ : ಕಾಡಾನೆಗೆ ರೈತ, ಜನಸಾಮಾನ್ಯ, ಮಹಿಳೆ, ಪುರುಷ, ಹೋರಾಟಗಾರ ಅಥವಾ ಅಧಿಕಾರಿ ಎಂಬ ಬೇಧಭಾವ ಇಲ್ಲ. ತನಗೆ ತೊಂದರೆ ನೀಡುವ ಎಂದು ತೋರುವ ಮನುಕುಲಕ್ಕೆ ಕಾಡಾನೆಗಳು ದಾಳಿ ಮಾಡಿಯೇ ತೀರುತ್ತದೆ ಎಂಬುದಕ್ಕೆ ಇಂದಿನ ಘೋರ ಘಟನೆ ಸಾಕ್ಷಿ ಆಗಿದೆ ಎಂದು ಹೇಳಿದ ಮಲೆನಾಡ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೆಕೆರೆ.

ಆನೆ ನಡೆದದ್ದೇ ದಾರಿ ಎಂಬಂತೆ ಕಾಡಾನೆ ಮತ್ತು ಮಾನವ ಸಂಘರ್ಷ ನಮ್ಮ ಸಕಲೇಶಪುರದಲ್ಲಿ ನಿಲ್ಲದು, ರೈತರ ಸಾವಿಗೆ ಹೋರಾಟ ಮಾಡಿದ ನಮ್ಮಂತಹ ಹೋರಾಟಗಾರರನ್ನು ಕುಗ್ಗಿಸುವ ಪ್ರಯತ್ನ ಮಾಡಿದ ಅಧಿಕಾರಿಗಳೇ ನಿಮ್ಮ ಅಧಿಕಾರಿ ವರ್ಗದವರನ್ನು ಉಳಿಸಿಕೊಳ್ಳಲು ಆಗದ ನೀವು ಸಾರ್ವಜನಿಕರ ಪ್ರಾಣ ಹೇಗೆ ಉಳಿಸುವಿರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮುಂದೊಂದು ದಿನ ನನ್ನ ಸಾವು ಕೂಡಾ ಕಾಡಾನೆಯ ಪಾದಕ್ಕೆ ಸಮರ್ಪಿತ ಆಗಿದ್ದು ಒಬ್ಬ ಹೋರಾಟಗಾರನ ಸಾವಿನಿಂದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಲಿ, ಶಾಶ್ವತ ಪರಿಹಾರ ದೊರಕುವ ವರೆಗೆ ನನ್ನ ದೇಹವನ್ನು ಹೋರಾಟಗಾರರ ಬಳಿಯಿಂದ ಕಸಿದುಕೊಳ್ಳುವ ಪ್ರಯತ್ನ ಅಧಿಕಾರಿಗಳು ಮಾಡದಿರಿ.

ನಮಗೆ ಬೇಕಾಗಿರುವುದು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಷ್ಟೇ.ಅಧಿಕಾರಿಗಳು ಒಂದಂತೂ ನೆನಪಿಡಬೇಕಿದೆ. ಇಂದು ವೆಂಕಟೇಶ್ ಆನೆಗೆ ಚಿಕಿತ್ಸೆ ನೀಡಲಿಕ್ಕಾಗಿ ಹೋದದ್ದು, ಆದರೆ ಆನೆ ಮಾತ್ರ ತನಗೆ ಚಿಕಿತ್ಸೆ ನೀಡಲು ಬಂದವರನ್ನು ಕೂಡಾ ದಾಕ್ಷಿಣ್ಯಾ ಇಲ್ಲದೆ ತುಳಿದು ಹಾಕಿದೆ.

ಮನುಷ್ಯನ ಬಗ್ಗೆ ಆನೆ ಕರುಣೆ ಇಲ್ಲದಂತೆ ವರ್ತಿಸಿರುವುದು ಇಂದು ಸಾಬೀತಾಗಿದೆ. ಈ ವಿಚಾರವನ್ನು ಅಧಿಕಾರಿಗಳು ಅರಿತು ಕೊಂಡರೆ ಸಾಕು ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *