ಬೆಂಗಳೂರು :- ನಾಲ್ಕು ಸಮ್ಮೇಳನಗಳು ಬೇರೆ ಬೇರೆ ದೇಶಗಳಲ್ಲಿ ನೆಡೆದಿದ್ದು ಅದರಲ್ಲೂ 2001ರಲ್ಲಿ ಇಂಗ್ಲೆಂಡ್ ನಲ್ಲಿ,ಎರಡನೇ ಸಮ್ಮೇಳನ ಬ್ರೆಜಿಲ್ ನಲ್ಲಿ, ಮೂರನೇ ಸಮ್ಮೇಳನ ಗೋಟೆಮಾಲ, ನಾಲ್ಕನೇ ಸಮ್ಮೇಳನ ಇಂಡೋನೇಶ್ಯದಲ್ಲಿ ನಡೆದಿದೆ .
ಈ ಬಾರಿ ಐದನೇ ವಿಶ್ವಕಾಪಿ ಸಮ್ಮೇಳನವನ್ನು ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರು ಅರಮನೆ ಆವರಣದಲ್ಲಿ ನೆಡೆಸುವ ಅವಕಾಶ ಭಾರತ ದೇಶಕ್ಕೆ ಸಿಕ್ಕಿದ್ದು.ಈ ಸಮ್ಮೇಳನ ಸೆಪ್ಟೆಂಬರ್ 25 ರಿಂದ 28 ನೇ ತಾರೀಖಿನವರೆಗೆ ಆಯೋಜಿಸಲಾಗಿತ್ತು.
ಇಂದು ಕೊನೆಯ ದಿನ ಆಗಿದ್ದು ಇದರಲ್ಲಿ ಭಾಗವಹಿಸಲು ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರು ಭೇಟಿ ನೀಡಿದರು.
ಈ ಸಮ್ಮೇಳನದಲ್ಲಿ 80 ದೇಶಗಳು ಭಾಗವಯಿಸಿದ್ದು ಇದರಲ್ಲಿ 250 ಕ್ಕು ಹೆಚ್ಚು ವಿಜ್ಞಾನಿಗಳು ಭಾಗವಹಿಸುವ ಮೂಲಕ ಬೆಳೆಗಾರರಿಗೆ ವಿಜ್ಞಾನಿಗಳಿಂದ ಕಾಫಿ ಉತ್ಪಾದನೆ ಹಾಗೂ ಸಂಸ್ಕರಣೆ , ಮಾರುಕಟ್ಟೆ ವಿಚಾರವಾಗಿ ಮಾಹಿತಿ ನೀಡಿದರು .ಇಂದು ಕೊನೆಯ ದಿನವಾಗಿರುವಿದರಿಂದ ಸಮ್ಮೇಳನ ವಿಶಿಷ್ಟವಾಗಿದ್ದು ಇದರಲ್ಲಿ ಹೆಚ್ಚು ಕಾಫಿ ಗೆ ಸಂಬಂಧ ಪಟ್ಟ ವಸ್ತು ಪ್ರದರ್ಶನ ಇದ್ದು, ಈ ದಿನ ಹೆಚ್ಚಿನ ಬೆಳೆಗಾರರು ಭಾಗವಹಿಸಿದರು .
ಬ್ರೆಜಿಲ್ ನವರು ಕಾಫಿಯ ಮುಂದಿನ ಭವಿಷ್ಯ ಹಾಗೂ ವಿಯಟ್ನಾಂ ನವರು ಒಂದು ಎಕರೆಯಲ್ಲಿ ಕಾಫಿಯನ್ನು ಹೆಚ್ಚು ಬೆಳೆಯುವ ಬಗ್ಗೆ ಪ್ರಬಂಧ ಮಂಡಿಸಿದರು.
ವಳಲಹಳ್ಳಿ ಗ್ರಾಮಪಂಚಾಯಿತಿಯ 52 ಬೆಳೆಗರಾರ ಭೇಟಿ ನೀಡುವ ಮೂಲಕ ವಿವಿಧ ದೇಶದ ವಿವಿಧ ಬಗೆಯ ಕಾಫಿ ರುಚಿಯನ್ನ ಸವಿಯುವ ಮೂಲಕ ಐದನೇ ವಿಶ್ವಕಾಪಿ ಸಮ್ಮೇಳನದ ಸಂಭ್ರಮ ಆಚರಿಸಿದರು .