ಸಕಲೇಶಪುರ : ಹೋರಾಟ ನ್ಯಾಯ ಏನಿದ್ದರು ಬಲಿತ ದಲಿತರಿಗಷ್ಟೆ ಸಣ್ಣ ಅಲೆಮಾರಿ ಆದಿವಾಸಿಗಳಿಗೆ ನ್ಯಾಯ ಎನ್ನುವುದು ಕಣ್ಣಿಗೆ ಕಾಣದ ಅಗೋಚರ ವಸ್ತುವಷ್ಟೆ. ನಾನು ನಮ್ಮ ಅಲೆಮಾರಿ ಆದಿವಾಸಿ ಸಮುದಾಯಗಳಿಗೆ ಅಂಬೇಡ್ಕರ್ ವಿಚಾರಗಳ ಬಗ್ಗೆ ಹೇಳಿ ಸಂಘಟಿತರಾಗಿ ಎಂದಾಗ ಜೋರಾಗಿ ನಗುತಿದ್ದರು , ನಮಗೆ ಯಾರೂ ಬೇಡ ನಾವು ದುಡಿದು ಬದುಕುವವರು ನಮಗೆ ಈ ಸಂಘಟನೆ ಹೋರಾಟ ಎಲ್ಲ ಬೇಡ, ಬೇಕಾದರೆ ನೀನು ಮಾಡ್ಕೊ ಅಂತ ತಮಾಷೆ ಮಾಡುತ್ತ ನನ್ನಿಂದ ದೂರ ಹೋಗುತಿದ್ದರು.

ಈಗಾದರು ಪ್ರತಿಸಲ ಊರಿಗೆ ಹೋದಾಗ ಪರಿಚಯಸ್ಥ ಬುಡಕಟ್ಟು ಯುವಕರಿಗೆ ಸಂಘಟನೆಯ ಮಹತ್ವದ ಬಗ್ಗೆ ತಿಳಿಸುತ್ತಿದ್ದೆ , ಅದನ್ನು ಕೇಳಿಯೂ ಕೇಳಿಸಿಕೊಳ್ಳದವರಂತೆ ಎದ್ದು ಹೋಗುತ್ತಿದ್ದವರು ಒಂದು ಕಡೆಯಾದರೆ ಮತ್ತೊಂದಷ್ಟು ಯುವಕರು ನನ್ನ ಫೋನ್ ಕೂಡ ತೆಗೆಯದೆ “ಈಗ ಶುರು ಮಾಡ್ದ್ನಪ್ಪ ಅಂಬೇಡ್ಕರ್ ಪಾಠ” ಅಂತ ಹೀಗೆ ತಮಾಷೆ ಗೇಳಿ ಮಾಡುತಿದ್ದರು. ಇದನ್ನೆಲ್ಲಾ ಯಾಕೆ ಹೇಳ್ತಿದ್ದಿನಿ ಅಂದರೆ ಇವತ್ತು ಹಾನುಬಾಳು ಹೋಬಳಿಯ ಮಗಜಳ್ಳಿ ಗ್ರಾಮದಲ್ಲಿ ಸುನೀಲ್ ( 26 ) ಎಂಬ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ.

ಈ ಹುಡುಗನಿಗೆ ಯಾವುದೇ ಸಂಘಟನೆಯ ಪರಿಚಯವಿಲ್ಲ ಹಣವಂತನೂ ಕೂಡ ಅಲ್ಲ ನನಗೆ ತಿಳಿದಿರುವ ಮಾಹಿತಿಯಂತೆ ಈತ ಒಂದು ಲೈನ್ ಮನೆಯಲ್ಲಿ ಕಾಫಿ ತೋಟದ ಕೂಲಿ ಕಾರ್ಮಿಕನಾಗಿದ್ದು ತನ್ನದೇ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸುತಿದ್ದನಂತೆ ?, (ಸರಿಯಾದ ಮಾಹಿತಿ ಇಲ್ಲ) ಈಗ ಆಕೆ ಗರ್ಭಾವತಿಯಾಗಿದ್ದು ನೆನ್ನೆ ಸಕಲೇಶಪುರ ಗ್ರಾಮಂತರ ಠಾಣೆಯಲ್ಲಿ ಈ ವಿಚಾರವಾಗಿ ಕರೆದು ಮಾತನಾಡಿಸಿದ್ದು ಇಂದು ಬೆಳಿಗ್ಗೆ ಆತ ವಾಟ್ಸಪ್ ಅಲ್ಲಿ ಗೆಳೆಯನೊಬ್ಬನಿಗೆ ಡೆತ್ ನೋಟ್ ಶೇರ್ ಮಾಡಿ ನೇಣಿಗೆ ಶರಣಾಗಿದ್ದಾನೆ.

ನಿಜವಾಗಿ ಸಕಲೇಶಪುರದ ದಲಿತ ಹೋರಾಟಗಾರರು ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಸತ್ಯಾಸತ್ಯಾತೆಯನ್ನು ಅರಿತು ಈ ಯುವಕನ ಸಾವಿಗೆ ನ್ಯಾಯ ಕೊಡಿಸಬೇಕು ಅದೆಲ್ಲವನ್ನು ಬಿಟ್ಟು ಆತ ನಮ್ಮ ಜಾತಿಯವನಲ್ಲ ಎಂದು ಸುಮ್ಮನಾದರೆ ಅದು ನಿಮಗೆ ಬಿಟ್ಟಿದ್ದು.

ಜೈ ಭೀಮ್ ಇನ್ನಾದರು ನಮ್ಮ ಆದಿವಾಸಿ ಅಲೆಮಾರಿ ಬುಡಕಟ್ಟು ಯುವಕರು ಜಾಗೃತರಾಗಿ ಸಂಘಟಿತರಾಗಿ.

ಹೇಳಿಕೆ – ಇಂತಿ : ಜಯಕುಮಾರ್ ಹಾದಿಗೆ ಸಾಮಾಜಿಕ ಹೋರಾಟಗಾರ ಹಾನುಬಾಳು. ಸಕಲೇಶಪುರ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed