ಸಕಲೇಶಪುರ : ತಾಲ್ಲೂಕಿನ ಯಸಳೂರು ಹೋಬಳಿಯ ತೆಂಕಲಗೋಡು ಬೃಹನ್ಮಠದ ಚೆನ್ನಸಿದ್ದೆಶ್ವರ ಸ್ವಾಮಿಜಿಯವರು ಕನ್ನಡ ಪರ ಹೋರಾಟಗಾರರು, ರೈತಪರ ಹೋರಾಟಗಾರರು ,ಸರ್ಕಾರಿ ಶಾಲಾ ಮಕ್ಕಳ ಪ್ರೇಮಿ, ರಕ್ತದಾನಿಗಳು ಹಾಗೂ ಪರಿಸರ ಪ್ರೇಮಿ ಆದ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಇವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ದೊರೆತಿರುವುದಕ್ಕೆ ರಘು ಪಾಳ್ಯ ಅವರನ್ನು ಮಠಕ್ಕೆ ಆಹ್ವಾನ ಮಾಡಿ ಅವರಿಗೆ ಆಶಿರ್ವಚನ ಮಾಡಿದರು

ನಂತರ ಮಾತನಾಡಿ ನಿಮ್ಮಂತ ಕನ್ನಡ ಪರ ಹೋರಾಟಗಾರರು ಇಂದು ಕೂಡ ಇವತ್ತು ಕನ್ನಡ ನಾಡಿನಲ್ಲಿ ಇರುವುದರಿಂದ ಕನ್ನಡದ ಅಸ್ಮಿತೆ ಉಳಿದಿದೆ ಹಾಗಾಗಿ ನಿಮ್ಮಂತ ಕನ್ನಡ ಪರ ಹೋರಾಟಗಾರರ ಜೊತೆ ಸದಾ ನಾವು ಇರುತ್ತೇವೆ ಹಾಗೂ ನಮ್ಮ ಆಶಿರ್ವಾದ ಇದ್ದೆ ಇರುತ್ತದೆ ಎಂದು ತಿಳಿಸಿ ರಘುರವರಿಗೆ ಅಭಿನಂದನೆಗಳನ್ನು ತಿಳಿಸಿ ಅಭಿನಂದಿಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *