ಸಕಲೇಶಪುರ:- ತಾಲ್ಲೂಕಿನ ಕುರಬತ್ತೂರು ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 8ನೇ ಮಾಸಿಕ ಸಭೆಯನ್ನು ಬಿ.ಟಿ ಕಿರಣ್ ಅವರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆಗೆ ಸರ್ಕಾರದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಗಮನವನ್ನು ಸೆಳೆಯಲು ಯಾವ ರೀತಿ ಬೆಳೆಗಾರರು ಸಂಘಟಿತರಾಗಬೇಕು ಎಂಬುದನ್ನು ಅಧ್ಯಕ್ಷರ ಜೊತೆ ಬೆಳೆಗಾರರು ಸುದೀರ್ಘವಾಗಿ ಚರ್ಚಿಸಲಾಯಿತು.
ನಂತರ ಸಭೆಯಲ್ಲಿ ಮುಂದಿನ ತಿಂಗಳು 1ನೇ ತಾರೀಕು ಭಾನುವಾರದಂದು ಸಕಲೇಶಪುರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕಾಫಿ ಸಮ್ಮೇಳನಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್ಚು ಬೆಳೆಗಾರರು ಭಾಗವಹಿಸುವ ಮೂಲಕ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕಾಫಿ ಬೆಳೆಯನ್ನು ಬೆಳೆಯುತ್ತಿರುವ ರೀತಿ ಮತ್ತು ಕಾಫಿ ಅತಿ ಹೆಚ್ಚು ಉತ್ಪಾದನೆಗೆ ಅನುಸರಿಸಬೇಕಾದ ವೈಜ್ಞಾನಿಕ ರೀತಿಯ ಮಾಹಿತಿಯನ್ನು ಬಂದ ತಜ್ಞರಿಂದ ತಿಳಿದುಕೊಳ್ಳುವಂತೆ ಹಾಗೂ ಕಾರ್ಯಕ್ರಮಕ್ಕೆ ಪ್ರತಿ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕರೆ ತರುವ ಮೂಲಕ ಕಾರ್ಯಕ್ರಮದ ಮಾಹಿತಿಯನ್ನು ಅವರು ಕೂಡ ತಿಳಿದುಕೊಳ್ಳುವಂತೆ ಕಾರ್ಯ ಕೈಗೊಳ್ಳಬೇಕೆಂದು ಅಧ್ಯಕ್ಷರಾದ ಬಿ.ಟಿ ಕಿರಣ್ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ಬೆಳೆಗಾರರ ಸಂಘದಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಆರ್.ಎಫ್ (MRF)ಲೋಹಿತ್ ಅವರು ತಮ್ಮ ವೈಯಕ್ತಿಕ ಕೆಲಸಗಳಿಂದಾಗಿ ಸಂಘದ ಹುದ್ದೆಗೆ ಕೆಲಸ ಮಾಡಲು ಸಾಧ್ಯವಾಗದ ಕಾರಣ ಆ ಸ್ಥಾನಕ್ಕೆ ಚೇತನ್ ಯಡವರಹಳ್ಳಿಯವರನ್ನು ಸಂಘದ ಎಲ್ಲಾ ನಿರ್ದೇಶಕರ ಒಪ್ಪಿಗೆ ಮೇರೆಗೆ ಕಾಯದರ್ಶಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಯಿತು.
ಈ ಮಾಸಿಕ ಸಭೆಯಲ್ಲಿ ಕುರಬತ್ತೂರು ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಉದಯ್, ಖಜಾಂಚಿ ಜಸ್ವಂತ್, ನಿರ್ದೇಶಕರುಗಳಾದ ಚಂದ್ರಶೇಖರ್,ನಾಗೇಶ್,ದರ್ಶನ್ ಪ್ರಸಾದ್, ದೇವರಾಜ್, ಅಭಿಷೇಕ್, ಗಿರೀಶ್,ಸಂತೋಷ್, ಹೆನ್ನಲಿ ಗಂಗಾಧರ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಬೆಳೆಗಾರರು ಈ ಮಾಸಿಕ ಸಭೆಯಲ್ಲಿ ಭಾಗವಹಿಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಿದರು.