ಸಕಲೇಶಪುರ : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋದಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಸಕಲೇಶ್ವರಸ್ವಾಮಿ ದೇವಾಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು ನಂತರ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ನಂತರ ಹಳೆಬಸ್ ನಿಲ್ದಾಣದ ರಸ್ತೆಯಲ್ಲಿ ಕೆಲ ನಿಮಿಷಗಳಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆದು ಕಾವೇರಿ ನಮ್ಮದು ಪ್ರಾಣ ಕೊಟ್ಟೇವು ಕಾವೇರಿ ನೀರು ಬಿಡುವುದಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು.
ನಂತರ ಕರವೇ ತಾಲೂಕು ಅದ್ಯಕ್ಷ ರಮೇಶ್ ಪೂಜಾರಿ ಮಾತನಾಡಿ ಮಾತನಾಡಿ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ನಮ್ಮ ಸಂಘಟನೆಯ ವತಿಯಿಂದ ಸಕಲೇಶಪುರದ ವರ್ತಕರು ಬಂದ್ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಈ ಮನವಿಗೆ ಎಲ್ಲರೂ ಕೂಡ ಸಹಾಕಾರ ನೀಡಿದ್ದು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೇಯೇ ಕಾವೇರಿಯ ವಿಚಾರವಾಗಿ ಕೂಡಲೇ ಕೇಂದ್ರ ಸರ್ಕಾರದ ಪ್ರದಾನಿಗಳಾದ ನರೇಂದ್ರ ಮೋದಿಯವರು ರಾಜ್ಯಸರ್ಕಾರದ ಪರವಾಗಿ ನಿಲ್ಲುವ ಮೂಲಕ ಸಹಕಾರ ನೀಡಬೇಕು ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದರು.
ಕರವೇ ಸಂಘಟನೆಯ ಮಹಿಳಾ ಕಾರ್ಯಕರ್ತೆಯಾದ ಪವಿತ್ರ ಮಂಜುನಾಥ್ ಮಾತನಾಡಿ ನಮ್ಮಲ್ಲಿ ಹುಟ್ಟಿ ಹರಿಯುವ ಕಾವೇರಿಯ ನೀರನ್ನು ನಮಗೆ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ಹರಿಸುವುದು ಎಷ್ಟು ಸರಿ ನೀರು ಕೊಡಬೇಡಿ ಎಂದು ಹೇಳುವುದಿಲ್ಲ ನಮಗೆ ಎಷ್ಟು ನೀರು ಬೇಕೋ ಅದನ್ನು ಶೇಖರಿಸಿಟ್ಟಕೊಂಡು ಹೆಚ್ಚುವರಿ ನೀರು ಕೊಡಲಿ ಆದರೆ ಸರಿಯಾಗಿ ಮಳೆಬಾರದೆ ನೀರಿನ ಅಭಾವವನ್ನು ನಾವು ಎದುರಿಸುವಾಗ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಬಾರದು ಎಂದು ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಕರವೇ ಕಾರ್ಯದರ್ಶಿ ರವಿ ಅಗ್ನಿ, ನಗರ ಅದ್ಯಕ್ಷ ಶರಣ್, ಉಮೇಶ್, ಬಸವರಾಜು ಬೆಳಗೋಡು, ಸಂತೋಷ್, ಉಮ್ಮರ್ ,ಇಬ್ರಾಹಿಂ, ಮಹಡಿ ಮನೆ ನಿಂಗೇಗೌಡ ,ಜಗದೀಶ್, ಹರೀಶ್, ಅರುಣ್, ಗೋಪಿ, ನಾಗೇಶ್, ಚೇತನ್, ಧರ್ಮಪ್ಪ, ರವಿ ನಾರಾಯಣ, ಇತರರು ಇದ್ದರು.