ಮಹಿಳಾ ಮೀಸಲಾತಿ ಮಸೂದೆಗೆ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದು, ಇದೀಗ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಕಾನೂನಾಗಿ ಮಾರ್ಪಟ್ಟಿದೆ.
ಈ ಕಾನೂನು ಜಾರಿಯಾದ ಬಳಿಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಆದರೆ, ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ.
ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದರೂ ಕಾನೂನು ಮಾತ್ರ ಸಧ್ಯಕ್ಕೆ ಜಾರಿಯಾಗುತ್ತಿಲ್ಲ.ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿತು. ಎಐಎಂಐಎಂ ಮಾತ್ರ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದು, ಮುಸ್ಲಿಂ ಮಹಿಳಾ ಪ್ರತಿನಿಧಿಗಳಿಗೆ ಮೀಸಲಾತಿ ಇಲ್ಲದಿರುವುದರಿಂದ ಇದು ಸವರ್ಣ ಮಹಿಳೆಯರನ್ನು ಮಾತ್ರ ಉನ್ನತೀಕರಿಸುತ್ತದೆ ಎಂದು ಹೇಳಿದೆ.
ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿ ನೀಡಬೇಕು ಮತ್ತು ಸಂಸತ್ತಿನಲ್ಲಿ ಅಂಗೀಕಾರದ ನಂತರ ರಾಷ್ಟ್ರಪತಿಯವರ ಒಪ್ಪಿಗೆ ಪಡೆದರೂ ಅದನ್ನು ಜಾರಿಗೆ ತರಲು ದೀರ್ಘಾವಧಿ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿತು.