ಸಕಲೇಶಪುರ ತಾಲೂಕು ಕಸಬಾ ಹೋಬಳಿ ಸತ್ತಿಗಾಲ್ ಗ್ರಾಮದ ಸತ್ತಿಗಾಲ್ ಆರ್.ಮಹೇಶ್ ಇಂದು ಅವರ ನಿವಾಸವಾದ ರಾಘವೇಂದ್ರ ಬಡಾವಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಕಾರ್ಯಕ್ರಮಕ್ಕೆ ಹೊರಗೆ ಹೋಗಿದ್ದರು ಅವರ ಪತ್ನಿ ಅನೇಕ ಬಾರಿ ಮೊಬೈಲ್ ಗೆ ಫೋನ್ ಮಾಡಿದರೂ ಕೂಡ ಫೋನ್ ರಿಸೀವ್ ಮಾಡದೇ ಇದ್ದಾಗ ಇಂದು ರಾತ್ರಿ 8 ಗಂಟೆ ಸಮಯದಲ್ಲಿ ಮನೆಗೆ ಬಂದು ನೋಡಿದಾಗ ಮಹೇಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.ಮೃತರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು ಪತ್ನಿ ಹಾಗೂ ಅಪಾರ ಸ್ನೇಹಿತರ ಬಳಗವನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಮಲೆನಾಡು ಗುತ್ತಿಗೆದಾರರ ಸಂಘ ಹಾಗೂ ವಿದ್ಯಾ ಗಣಪತಿ ಮಿತ್ರ ಮಂಡಳಿ ಬಾಳೆಗದ್ದೆ ಸಂತಾಪ ಸೂಚಿಸಿದೆ.