ಸಕಲೇಶಪುರ :- ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಪ್ರತಿದಿನ ಕಾಡನೆ ಸಮಸ್ಯೆ ಹೆಚ್ಚಾಗುತ್ತಿದ್ದು ಇದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಉಳಿಸಿಕೊಳ್ಳಲು ಹರಾಸಾಹಸ ಪಡಬೇಕಾಗಿದೆ.

ಬಾಚಿಹಳ್ಳಿ ಗ್ರಾಮದಲ್ಲಿ ಕಾಡನೆಯಿಂದ ಬೆಳೆ ಹಾನಿ ಅದ ಸೋಮಶೇಖರ್ ಬಿ.ಎ ಅವರ ಕಾಫಿ ತೋಟಕ್ಕೆ ದಿನಾಂಕ:29.09.2023 ರಂದು ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.

ಕಾಡಾನೆ ಯಿಂದ 30 ರಿಂದ 40 ಕಾಫಿ ಗಿಡಗಳು ನಾಶವಾಗಿದ್ದು, ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ಸರ್ಕಾರದಿಂದ ಪರಿಹಾರದ ಹಣವನ್ನು ಅವರ ಖಾತೆಗೆ ಆದಷ್ಟು ಬೇಗ ವರ್ಗಾಯಿಸುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಎಫ್.ಓ ಮೋಹನ್ ಕುಮಾರ್, ಎ.ಸಿ.ಎಫ್ ಮಹದೇವ್, ಆರ್. ಎಫ್.ಓ ಜಗದೀಶ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed