ಸಕಲೇಶಪುರ : ಪಟ್ಟಣದ ಕಸವನ್ನು ಕೆಲ ವರ್ಷಗಳಿಂದ ಸುಭಾಷ್ ಮೈದಾನದ ಜಾತ್ರಾ ಮೈದಾನದಲ್ಲಿ ಹಾಕಲಾಗುತ್ತಿತ್ತು ,ಆದರೆ ಕಳೆದ ವರ್ಷ ಜಾತ್ರೆ ಮೈದಾನದಲ್ಲಿ ವಸ್ತು ಪ್ರದರ್ಶನ ನಡೆಸುವ ಸಲುವಾಗಿ ಅಲ್ಲಿಂದ ಆ ಕಸವನ್ನು ಸ್ಥಳಾಂತರ ಮಾಡಲಾಯಿತು.

ಆದರೆ ಮತ್ತೆ ಈಗ ಅಲ್ಲಿಯೇ ಕಸವನ್ನು ಹಾಕುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ದುರ್ವಾಸನೆ ಕುಡಿದುಕೊಂಡೆ ವ್ಯಾಪಾರ ಮಾಡುವ ಹಾಗಾಗಿದೆ.

ಹಾಗೂ ಸುಭಾಷ್ ಮೈದಾನಕ್ಕೆ ಆಟವಾಡಲು ಬರುವ ಕ್ರೀಡಾಪಟುಗಳಿಗೆ ಹಾಗೂ ಶಾಲಾ ಮಕ್ಕಳ ಮೂಗು ಮುಚ್ಚಿಕೊಂಡು ಆಟವಾಡುವ ಪರಿಸ್ಥಿತಿ ಎದುರಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟಗಾರರಿಗೆ ಇದೇ ಸ್ಥಳದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುತ್ತಿತ್ತು ಈ ವರ್ಷ ಪಟಾಕಿ ಮಾರಾಟಗಾರರಿಗೆ ಈ ಸ್ಥಳವನ್ನು ನೀಡಿದರೆ ಗ್ರಾಹಕರು ಪಟಾಕಿಯನ್ನು ಖರೀದಿಸಲು ಬರುವುದೆ ಅನುಮಾನವಾಗಿದೆ.

ಇವರು ಪಕ್ಕದ ಹಾಸನ ಜಿಲ್ಲೆಯೇ ಹೋಗಿ ಪಟಾಕಿಯನ್ನು ತರುವ ಸಂದರ್ಭ ಎದುರಾದರು ಆಶ್ಚರ್ಯ ಪಡಬೇಕಾಗಿಲ್ಲಾ.

ಇಂದು ಶಾಲಾ ಮಕ್ಕಳಿಗೆ ಸುಭಾಷ್ ಮೈದಾನದಲ್ಲಿ ಸ್ಪೋರ್ಟ್ಸ್ ನೆಡೆಯುತ್ತಿದ್ದು, ಶಾಲಾ ಮಕ್ಕಳಿಗೆ ಎನಾದರೂ ಸಮಸ್ಯೆ ಆದರೆ ಇದಕ್ಕೆ ಸಕಲೇಶಪುರ ಪುರಸಭೆ ಹಾಗೂ ತಾಲ್ಲೂಕು ಆಡಳಿತ ನೇರ ಹೊಣೆಯಾಗಿರುತ್ತದೆ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯದ್ಯಕ್ಷ ಸಾಗರ್ ಜಾನಕೆರೆ ಆರೋಪಿಸಿದ್ದಾರೆ .

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed