
ಸಕಲೇಶಪುರ : ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಇವರ ವತಿಯಿಂದ ಇಂದು ಸಕಲೇಶಪುರದ ಹಳೆ ಬಸ್ ಸ್ಟ್ಯಾಂಡ್ ನಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಮೊದಲಿಗೆ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಸಕಲೇಶಪುರದ ಜೂನಿಯರ್ ಅಪ್ಪು ರವರು ಚಾಲನೆ ನೀಡಿ ಮಾತನಾಡಿದ ಅವರು ಈ ದಿನ ನನ್ನ ಹುಟ್ಟೂರು ಆದ ಸಕಲೇಶಪುರದಲ್ಲಿ ಪುನೀತ್ ರಾಜಕುಮಾರ್ ರವರ ಎರಡನೇ ವರ್ಷದ ಪುಣ್ಯಸ್ಮರಣ ಕಾರ್ಯಕ್ರಮವನ್ನು ಅನ್ನ ಸಂತರ್ಪಣೆ ಮಾಡುವ ಮೂಲಕ ಮಾಡುತ್ತಿರುವುದು ನನಗೆ ಸಂತೋಷ ಉಂಟುಮಾಡಿದೆ,
ಈ ದಿನ ರಾಜ್ಯಾದ್ಯಂತ ವ್ಯಕ್ತಿತ್ವದ ಸರದಾರ, ಯುವರತ್ನ, ಸ್ಪೂರ್ತಿ ರತ್ನ, ಅಪ್ಪು ರವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ್ದಾರೆ ,
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿದ್ದಾರೆ ಅವರಿಗೆ ಸಹ ನನ್ನ ಅಭಿನಂದನೆಗಳು ಸಲ್ಲಿಸುತ್ತೇನೆ. ಪುನೀತ್ ರಾಜಕುಮಾರ್ ರವರು ಎಲ್ಲರ ಮನಸ್ಸನ್ನು ಗೆದ್ದಂತವರು ಎಲ್ಲ ಜನ ಹೃದಯವನ್ನು ಗೆದ್ದಂತವರು ಅಂತ ವ್ಯಕ್ತಿತ್ವವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಲು ಸಾಧ್ಯವೇ ಇಲ್ಲ, ಅವರು ಎಲ್ಲರೂ ಜೊತೆಯಲ್ಲೂ ಇದ್ದಾರೆ ದೇವರಾಗಿದ್ದಾರೆ, ಹಾಗಾಗಿ ಅವರು ಮಾಡಿದಂತಹ ಸಾಧನೆಗಳನ್ನು ಮಾಡಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರು ಇವತ್ತು ದೇವರ ಆಗಿದ್ದಾರೆ, ಇಂದು ನಾವು ದೇವರ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜ್ಞಾನೇಶ್ ಮಾತನಾಡಿ ಅಪ್ಪುರವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ 3000 ಜನಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ, ನಾವು ಬದುಕಿದರೆ ಪುನೀತ್ ರಾಜಕುಮಾರ್ ತರ ಬದುಕಬೇಕು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಅವರು ನಡೆದ ದಾರಿಯಲ್ಲಿ ನಾವು ನಡೆದು ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೃಪಾಲ್, ಪ್ರವೀಣ್, ಹೆಬ್ಬಸಾಲೆ ಚಂದ್ರು, ಹೆಬ್ಬಸಾಲೆ ಮಹಮ್ಮದ್ (ಮೋಣಕ್ಕ), ಪ್ರಶಾಂತ್ ಇತರರು ಇದ್ದರು.


