ಭಕ್ತಿ ಪಂಥದ ಮುಖ್ಯ ದಾಸರಲ್ಲಿ ಕನಕ ದಾಸರು ಒಬ್ಬರು ಜಿಲ್ಲಾಧಿಕಾರಿ ಸಿ. ಸತ್ಯಭಾಮ
ಹಾಸನ : ಕನಕದಾಸರು ಕರ್ನಾಟಕದಲ್ಲಿ ೧೫-೧೬ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ದಾಸರಲ್ಲಿ ಒಬ್ಬರಾಗಿದ್ದರು ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಾಸ ಶ್ರೇಷ್ಠ ಕನಕದಾಸ ಜಯಂತ್ಯೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಮಾಡಿದ ಅವರು, ಕನಕ ದಾಸರ ಭಕ್ತಿ ಎಷ್ಟು ಶ್ರೇಷ್ಠ ಎಂಬುದಕ್ಕೆ ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನ ಸಾಕ್ಷಿಯಾಗಿದೆ ಎಂದರು.
ಕನಕದಾಸರು ಎಲ್ಲವನ್ನೂ ತೊರೆದು ಶ್ರೀ ಕೃಷ್ಣನ ದಾಸರಾಗಿದ್ದರು, ಕನಕದಾಸರ ಹೆಸರು ಅಜಾರಾಮರ . ಇಂತಹ ಸಂತರ ಬಗ್ಗೆ ಅರಿಯಬೇಕು, ಸಾಧು ಸಂತರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಕೊಡುಗೆ ಅಪಾರವಾದ್ದುದ್ದು ಆದ್ದರಿಂದ ಇಂತಹ ಮಹನ್ನಿಯರ ಬಗ್ಗೆ ಸಮಾಜಕ್ಕೆ ಅರಿಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ವಿಶ್ರಾಂತ ಡೀನ್ ಆರ್ ಓಬಳೇಶಘಟ್ಟಿ ಅವರು ಮಾತನಾಡಿ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ, ಯುದ್ದ ಕಲೆ, ಮಲ್ಲ ಯುದ್ದ ಅನೇಕ ವಿಷಯಗಳ ಬಗ್ಗೆ ಅರಿತಿದ್ದರು. ೭೫ ಹಳ್ಳಿಗಳ ದಂಡನಾಯಕನ್ನಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಅಲ್ಲಿಯ ಜನರು ಇವರ ಸೇವೆಗಾಗಿ ಕನಕನಾಯಕ ಎಂದು ಹೆಸರನ್ನು ನೀಡುತ್ತಾರೆ ಎಂದರು.
ಅನೇಕ ಕೃತಿಗಳನ್ನೂ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲಯ ಬಲ್ಲಿರಾ ಎಂದು ೧೫ ನೇ ಶತಮಾನದಲ್ಲಿ ಕನಕದಾಸರು ಹೇಳಿದ್ದಾರೆ.
ದಾಸ ಶ್ರೇಷ್ಟ ಕನಕದಾಸರ ಜೀವನ ಚರಿತ್ರೆಯ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲೇಶ್ ಗೌಡ ಅವರು ಮಾತನಾಡಿ, ದಾಸ ಶ್ರೇಷ್ಠರ ಬಗ್ಗೆ , ಕನ್ನಡ ನಾಡಿನ ಸಂತರ ವಿಶ್ವ ಪ್ರಸಿದ್ಧಿಯ ಬಗ್ಗೆ ತಿಳಿಸಿದರು.
ಹಾಸನ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ ಅವರು ಮಾತನಾಡಿ, ಶ್ರೀಕೃಷ್ಣನ ದಾಸನಾದ ಕನಕದಾಸರು ಒಂದು ಸಮಾಜಕ್ಕೆ ಸೀಮಿತವಲ್ಲ ಸಾಧು ಸಂತರು ಎಲ್ಲಾ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಅದನ್ನು ನಾವು ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಂಕುತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಪುಟ್ಟಸ್ವಾಮಿಶೆಟ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ತಾರಾನಾಥ್ ಹಾಗೂ ಮತಿತ್ತರು ಹಾಜರಿದ್ದರು