ಹಾಸನ: ಜಗತ್ತಿನಲ್ಲಿ ನಿಜವಾದ ವಿದ್ವಾಂಶರು ಇದ್ದರೇ ಕನ್ನಡ ಭಾಷೆಯಲ್ಲಿ ಮಾತ್ರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಕುವೆಂಪು ರಸ್ತೆ ಬಳಿ ಇರುವ ಜಿಲ್ಲಾ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸದಸ್ಯರ ಜನರಲ್ ಬಾಡಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್ ನಿರ್ದೇಶಕರು ಹಾಗೂ ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡರು ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಅವರು, ಕನ್ನಡ ನಾಡು ಪಲವತ್ತಾಗಿಯೇ ಇದೆ.

ಇಲ್ಲಿ ವಾಸ ಮಾಡುವ ನಾಡಿನ ಕನ್ನಡಿಗರು ಸರಳ ಹಾಗೂ ಯಾರೆ ಬಂದರೂ ಪ್ರೀತಿಸೊ ಹೃದಯ ಇರುವಂತವರು. ಪ್ರಪಂಚದ ಕೆಲ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಪ್ರಾಚೀನವಾಗಿದೆ. ಇದರಿಂದಲೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಎಂದರು.

ಪ್ರಪಂಚದಲ್ಲಿ ಹೆಚ್ಚು ಕೃತಿ ರಚನೆ ಆಗುತ್ತಿರುವುದು ಕನ್ನಡ ಭಾಷೆಯಲ್ಲಿ. ನಾಡಿನಲ್ಲಿ ಅಷ್ಟೊಂದು ಜನ ಲೇಖಕರು ಜೀವಂತವಾಗಿದ್ದಾರೆ. ಪ್ರಪಂಚದಲ್ಲಿ ಸಾಹಿತಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ. ಆದರೇ ಕನ್ನಡದಲ್ಲಿ ಪಂಪನಿಂದ ಹಿಡಿದು ಕುವೆಂಪು ವರೆಗೂ ಹತ್ತಕ್ಕೂ ಹೆಚ್ಚು ಕವಿಗಳು ಸಿಗುತ್ತಾರೆ. ವಿಶ್ವ ದರ್ಜೆಯ ಲೇಖಕನಾಗಿ ಕನ್ನಡದಲ್ಲಿ ಮಾತ್ರ ಸಿಗುತ್ತಾರೆ.

ಮಹಾಕಾವ್ಯ ಬರೆದವರಿದ್ದರೇ ಅದು ಕುವೆಂಪು ಮಾತ್ರ. ಕವಿಗಳು ಸುಮ್ಮನೆ ಜನ್ಮತಾಳಲ್ಲ. ಅದು ಮಣ್ಣಿನ ಗುಣ. ಜಗತ್ತಿನಲ್ಲಿ ನಿಜವಾಗಲು ವಿದ್ವಾಂಸರು ಇದ್ದರೆ ಕನ್ನಡದಲ್ಲಿ ಮಾತ್ರ ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ ಲಿಪಿ ಹೊಂದಿರುವ ಐದು ಭಾಷೆಯಲ್ಲಿ ಕನ್ನಡವು ಒಂದು. ಯಾವ ಭಾಷೆಯಲ್ಲಿ ಇಷ್ಟೊಂದು ಪದ ಸಂಪತ್ತು ಹೊಂದಿಲ್ಲ. ಆದರೇ ಕನ್ನಡ ಭಾಷೆಯಲ್ಲಿ ಮಾತ್ರ. ಕನ್ನಡ ಎಂದರೇ ಸುಂದರ ಭಾಷೆ ಮಾತನಾಡಲು ಅಭಿಮಾನಪಡಬೇಕು. ಯಾವತ್ತಿಗೂ ಹಿಂಜರಿಯಬಾರದು ಎಂದು ಕನ್ನಡ ನಾಡಿನ ಕವಿಗಳ ಬಗ್ಗೆ ಇದೆ ವೇಳೆ ನೆನಪಿಸಿಕೊಂಡು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಾಸನ ಲಯನ್ಸ್ ಕ್ಲಬ್ ಹಾಗೂ ಶಾಖೆಯ ಸದಸ್ಯರು ಪ್ರಥಮ ಸ್ಥಾನಗಳಿಸಿ ಕಫ್ ತಂದ ಹಿನ್ನಲೆಯಲ್ಲಿ ಕ್ರೀಡಾಪಟುಗಳನ್ನು ಇದೆ ವೇಳೆ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್, ಖಜಾಂಚಿ ಬಿ.ಎಂ. ರವಿಕುಮಾರ್, ಲಿಯೋ ಕ್ಲಬ್ ನ ಸುಪ್ರಿತಾ, ನೂತನ್, ಕಾರ್ಯದರ್ಶಿ ಸುವರ್ಚಲ, ಹಿರಿಯರಾದ ಅಂಬಸೇಡರ್ ಹೆಚ್.ಪಿ. ಅಶೋಕ್ ಕುಮಾರ್, ಜೂನ್ ಛೇರ‍್ಮನ್ ಎಸ್.ಪಿ. ಪ್ರಕಾಶ್, ಹೆಚ್.ಆರ್. ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *