ಸಕಲೇಶಪುರ : ಏಳನೇ ವಾರ್ಡಿನ ಪುರಸಭೆ ಉಪಚುನಾವಣೆ ನಾಳೆ ನಡೆಯಲಿದ್ದು 7 ನೇ ವಾರ್ಡಿನ ಮೇಗಲಕೊಪ್ಪಲಿನಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಶ್ರೀಮತಿ ಅರುಣ ಭಾರ್ಗವಿ ಎಸ್.ಕೆ.ಸೂರ್ಯ ಅವರು 7 ನೇ ವಾರ್ಡಿನ ಮತದಾರರೊಂದಿಗೆ ಇಂದು ಶ್ರದ್ದ ಭಕ್ತಿಯಿಂದ ಪೂಜೆ ಸಲ್ಲಿಸಿ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಆ ಚೌಡೇಶ್ವರಿ ಅಮ್ಮನು ಆಶೀರ್ವದಿಸಲೆಂದು ಬೇಡಿಕೊಂಡರು.