ಸಕಲೇಶಪುರ : ತಾಲೂಕಿನ ಪುರಸಭೆ ವ್ಯಾಪ್ತಿಯ 7 ನೇ ವಾರ್ಡಿನ ಉಪಚುನಾವಣೆಯಲ್ಲಿ ಹಿಂದುಳಿದ ವರ್ಗ ಮಹಿಳೆ A ವರ್ಗಕ್ಕೆ ಮೀಸಲಾಗಿದ್ದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅರುಣ ಭಾರ್ಗವಿ , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೇಷ್ಮಾಬಾನು, SDPI ಪಕ್ಷದ ಅಭ್ಯರ್ಥಿಯಾಗಿ ನೇಹಾ ಸಿಮ್ರಾನ್ ಚುನಾವಣೆಯಗೆ ಸ್ಪರ್ಧಿಸಿದ್ದರು,

ಈ ದಿನ ಮತ ಎಣಿಕೆ ಪೂರ್ಣಗೊಂಡಿದ್ದು , ಕಾಂಗ್ರೆಸ್ ಅಭ್ಯರ್ಥಿ 217 ಜೆಡಿಎಸ್ ಅಭ್ಯರ್ಥಿ 203 ಮತಗಳನ್ನು ಪಡೆದರೆ, SDPI ಅಭ್ಯರ್ಥಿ 20 ಮತ ಪಡೆದರೆ ನೋಟಾ 3 ಮತಗಳು ಚಲಾವಣೆಯಾಗಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿ ಅರುಣ ಭಾರ್ಗವಿ 203 ಮತಗಳನ್ನು ಪಡೆಯುವಲ್ಲಿ ಸಫಲರಾದರು,

ಕಾಂಗ್ರೆಸ್ ಅಭ್ಯರ್ಥಿ ರೇಷ್ಮಾಬಾನು 217 ಮತಗಳನ್ನು ಪಡೆಯುವ ಮೂಲಕ 14 ಮತಗಳ ಅಂತರದಲ್ಲಿ ವಿಜಯಶೀಲರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ್ ಮೂರ್ತಿ ಅವರು ಘೋಷಣೆ ಮಾಡಿದರು.

ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಯ ಪರ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುರಸಭಾ ಸದಸ್ಯೆ ಅನ್ನಪೂರ್ಣ, ಕೆಪಿಸಿಸಿ ಸದಸ್ಯರಾದ ಸಲೀಂ ಕೊಲ್ಲಹಳ್ಳಿ, ಎಡೆಹಳ್ಳಿ ಮಂಜುನಾಥ್, ಪುರಸಭಾ ಸದಸ್ಯರಾದ ಅಣ್ಣಪ್ಪ, ಪುರಸಭಾ ಮಾಜಿ ಅಧ್ಯಕ್ಷರಾದ ಸೈಯದ್ ಮುಫೀಜ್, ಕೌಶಲ್ಯ ಲಕ್ಷ್ಮಣ ಗೌಡ ಪಕ್ಷದ ಮುಖಂಡರಾದ ಬೈಕೆರೆ ದೇವರಾಜ್, ಹೆಚ್.ಹೆಚ್.ಉದಯ್, ಹಸೀನಾ ಹುರುಡಿ, ಲಕ್ಷ್ಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed