ಸಕಲೇಶಪುರ-ಹಾನುಬಾಳು : ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಯ ಆಹ್ವಾನ ಪತ್ರಿಕೆಯ ವಿತರಣೆ ಹಾಗೂ ಪ್ರಭು ಶ್ರೀ ರಾಮನ ಮಂತ್ರಾಕ್ಷತೆ ಯನ್ನು ಬಹಳ ವಿಜೃಂಭಣೆಯಿಂದ ವಾದ್ಯಗೋಷ್ಠಿಗಳ ನಡುವೆ ಪ್ರಭು ಶ್ರೀ ರಾಮನ ಭಾವಚಿತ್ರ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ ಭಾವಚಿತ್ರವನ್ನು ಹಾನುಬಾಳುವಿನ ಪ್ರಮುಖ ಬೀದಿಗಳಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಮೆರವಣಿಗೆ ಮಾಡಲಾಯಿತು

ಆನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ, ರಕ್ಷಿತ್ ಭಾರದ್ವಾಜ್ ಹಾಸನ ಜಿಲ್ಲಾ ಸಂಯೋಜಕರು ಶ್ರೀರಾಮ ಲಲ್ಲ ಪ್ರತಿಷ್ಠಾಪನ ಅಭಿಯಾನ , ಹಾಸನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು ಹಾಗು ನಂದನ್ ಸಕಲೇಶಪುರ ರಾಮಲಲ್ಲ ಪ್ರತಿಷ್ಠಾನ ಅಭಿಯಾನದ ಸಹ ಸಂಯೋಜಕರು, ದಿಲೀಪ್ ಸಂಚಾಲಕರು, ಸತ್ಯಣ್ಣ ಸಂಚಾಲಕರು, ಹಾಗೂ ಹಾನುಬಾಳುವಿನ ಕಾರ್ಯಕರ್ತರುಗಳು ಪೃಥ್ವಿ ಅವರೇಕಾಡು, ಲೋಹಿತ್ ಪೂಜಾರಿ ಹಾನುಬಾಳು, ದಿನೇಶ್ ಚಕ್ಕುಡಿಗೆ, ಶಶಿ ಸಂದೀಪ್ ಉಮೇಶ ಕೃಷ್ಣ ವಿಶ್ವ ಶರತ್ ಸಂದೇಶ ಹರ್ಷ ಕೀರ್ತಿ ಪ್ರಸನ್ನ ಮೋಹನ ಚಂದ್ರಕಾಂತ್ ನಿತಿನ್ ಸಂಜಯ್ ವಿನೋದ್ ಇನ್ನೂ ನೂರಾರು ಕಾರ್ಯಕರ್ತರಗಳು ಭಕ್ತಾದಿಗಳು ಹಾಗೂ ಹಾನಬಾಳುವಿನ ಎಲ್ಲಾ ಸಾರ್ವಜನಿಕರು ಹಾಜರಿದ್ದು ಈ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ. ನೆರವೇರಿಸಿದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *