ಸಕಲೇಶಪುರ:- ತಾಲ್ಲೂಕಿನ ಬಿರಡಹಳ್ಳಿ ಶ್ರೀ ಮಾರಿಕಾಂಭ ಸೇವಾ ಸಮಿತಿ ವತಿಯಿಂದ ಇಂದು ದಿನಾಂಕ 22.5.2025 ಗುರುವಾರ ಮತ್ತು 23.05.2025ನೇ ಶುಕ್ರವಾರದಂದು ಶ್ರೀ ರಾಮ ಮಂದಿರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮ ನೆಡೆಯಲಿದೆ.

ದಿನಾಂಕ 22-05-2025ನೇ ಗುರುವಾರ ಸಂಜೆ ಪ್ರಾರ್ಥನೆ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕೋಷ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಿಶಾಲ ರಕ್ಷ ಪೂಜಾ ಕಾರ್ಯಕ್ರಮ ನಂತರ ಪ್ರಸಾದ ವಿನಿಯೋಗ ಇರುತ್ತದೆ.

ದಿನಾಂಕ 23-05-2025 ನೇ ಶುಕ್ರವಾರ ಬೆಳಿಗ್ಗೆ 8-00 ರಿಂದ ಮಹಾಗಣಪತಿ ಹೋಮ, ಶ್ರೀ ದೇವರ ಪ್ರತಿಷ್ಠೆ ನೆಡೆಯಲಿದ್ದು ಬೆಳಗ್ಗೆ 9-45 ರಿಂದ 10-45 ರ ವರೆಗೆ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಮ್ಯಾಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳುಕುರಾಯ, ಪುತ್ತೂರು ರಿಂದ ನೆಡೆಯಲಿದೆ.ಶ್ರೀ ರಾಮ, ಲಕ್ಷ್ಮಣ, ಸೀತಾಮಾತಾ ಮತ್ತು ಅಂಜನೇಯಸ್ವಾಮಿ ಯವರ ಉತ್ಸವ ಮೂರ್ತಿಗಳ ಪೂಜಾ ಕಾರ್ಯಕ್ರಮಗಳು ನೆರವೇರುವುದು.ಹಾಗೂ ಬೆಳಿಗ್ಗೆ 11-00 ಗಂಟೆಗೆ ಮಹಾಮಂಗಳಾರತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಾರಿಕಾಂಬ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಹಾಗೂ ಬಿರಡಹಳ್ಳಿ ಗ್ರಾಮಸ್ಥರು ಕೇಳಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *