ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಬೋರ್ಡೊ ದ್ರಾವಣ ತಯಾರಿಕೆ ವಿಧಾನ’ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸಸ್ಯರೋಗಶಾಸ್ತ್ರ ತಜ್ಞರಾದ ಡಾ. ಚನ್ನಕೇಶವ. ಸಿ ರವರು ಆಗಮಿಸಿದ್ದರು. ಬೋರ್ಡೊ ದ್ರಾವಣದ ಇತಿಹಾಸ ಹಾಗೂ ತಯಾರಿಕೆ ವಿಧಾನದ ಬಗ್ಗೆ ವಿದ್ಯಾರ್ಥಿಯಾದ ಹೇಮಂತ್ ರವರು ತಿಳಿಸಿದರು .
ಬೋರ್ಡೊ ದ್ರಾವಣವು ಶಿಲೀಂದ್ರಗಳಿಂದ ಬೆಳೆಗಳಲ್ಲಿ ಆಗುವ ರೋಗದ ಹತೋಟಿಯಲ್ಲಿ ಬಹಳ ಸಹಕಾರಿಯಾಗಿದೆ ಎಂದು ತಿಳಿಸಿದರು ಹಾಗೂ ಇದನ್ನು ದ್ರಾವಣದ ರೂಪದಲ್ಲಿ ಅಥವಾ ಮಿಶ್ರಣದ ರೂಪದಲ್ಲಿ ಬೆಳೆಗಳಿಗೆ ಒದಗಿಸಬಹುದೆಂದು ತಿಳಿಸಿದರು .
ಬೋರ್ಡೊ ದ್ರಾವಣದ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಯೋಗಲಕ್ಷ್ಮಿ ಹಾಗೂ ಸೋಯಲ್ ರವರು ಮಾಡಿದರು .ಸಂಪನ್ಮೂಲ ವ್ಯಕ್ತಿಗಳಾದ ಡಾ. ಚನ್ನಕೇಶವ.ಸಿ ರವರು .ಬೋರ್ಡೊ ದ್ರಾವಣವು ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಶಿಲೀಂದ್ರಗಳಿಂದ ಆಗುವ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು ಹಾಗೂ ಇದನ್ನು ಜೋಳ ಹಾಗು ಸೌತೆಕಾಯಿ ಬೆಳೆಗಳಲ್ಲಿ ಬಳಸಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.