
ಸಕಲೇಶಪುರ : ನೂರಾರು ವರ್ಷಗಳ ಇತಿಹಾಸವಿರುವ ಕಸಬಾ ಹೋಬಳಿಯ ವ್ಯಾಪ್ತಿಯ ಬಿರಡಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುವ ಕೆಲಗಳಲೆ ಗ್ರಾಮದ ಶ್ರೀ ಮಾಕಾಳಮ್ಮ ಅಮ್ಮನವರ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರುಗಿತು.
ನೂರಾರು ಭಕ್ತರು ಸರತಿ ಸಾಲಿನಲ್ಲಿ ಸಾಗಿ ಶ್ರೀ ಅಮ್ಮನವರ ದರ್ಶನವನ್ನು ಪಡೆದರು
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾದಿಕಾರಿಗಳಿಂದ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.
ಅಮ್ಮನವರ ದರ್ಶನಕ್ಕೆ ವಿವಿದ ಊರುಗಳಿಂದ ಬರುವಂತ ಭಕ್ತರಿಗೆ ಪ್ರಸಾದವನ್ನೂ ಸಹ ಏರ್ಪಡಿಸಲಾಗಿತ್ತು.




