
ಸಕಲೇಶಪುರ : ಜಗಜ್ಯೋತಿ ಬಸವೇಶ್ವರ ಅವರ ಜಯಂತಿಯನ್ನು ಇಂದು ತಾಲೂಕು ಆಡಳಿತದ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.
ಜ್ವೋತಿ ಬೆಳಗಿಸುವ ಮೂಲಕ ಉಪವಿಭಾಗಾದಿಕಾರಿ ಡಾ.ಎಂಕೆ.ಶೃತಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಸವಣ್ಣ ಅವರು 12 ನೇ ಶತಮಾನದಲ್ಲಿ ಸಮಾಜದಲ್ಲಿ ಇದ್ದಂತಹ ಜಾತಿ ತಾರತಮ್ಯದ ವಿರುದ್ದ ಅನುಭವ ಮಂಟಪ ರಚಿಸುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯವನ್ನು ಕೊಡುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದವರು ಅವರ ತತ್ವ ಆದರ್ಶಗಳು ಇಂದು ನಮ್ಮೆಲ್ಲರಿಗೂ ಪ್ರೇರಣೆ ಎಂದರು