ಸಕಲೇಶಪುರ : ರಸ್ತೆ ಸುರಕ್ಷತಾ ದೃಷ್ಟಿಯಿಂದ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಪಟ್ಟಣದ ಲಯನ್ಸ್ ಹಾಲ್ ನಲ್ಲಿ ಸ್ಥಳೀಯ ಗ್ರಾಮಗಳ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಗ್ಗೆ ಚರ್ಚಿಸಲು ಗ್ರಾಮಗಳ ಗ್ರಾಮಸ್ಥರ ಸಭೆಯನ್ನು ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಯಿತು.
ತಾಲೂಕಿನ ಬಾಳ್ಳುಪೇಟೆಯಿಂದ ಆನೆಮಹಲ್ ವರೆಗೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಹಾದು ಹೋಗಿರುವ ಗ್ರಾಮಗಳಿಗೆ ಹೋಗಲು ಸರ್ವೀಸ್ ರೋಡ್, ಮೇಲ್ಸೇತುವೆ, ಅಂಡರ್ ಪಾಸ್ ಮಾಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಗಳ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಜಗದೀಶ್, ಗ್ರಾಮಾಂತರ ಠಾಣಾ ಸಬ್ ಇನ್ಸ್ಪೆಕ್ಟರ್ ತಿಪ್ಪಾರೆಡ್ಡಿ ,ನಿರಂಜನ್, ವೆಂಕಟೇಶ್, ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನೀಯರ್ ತಿಪ್ಪೇಸ್ವಾಮಿ ,ಗಿರೀಶ್ ಅಗರ್ವಾಲ್, ಪ್ರಶಾಂತ್ ಇದ್ದರು ಗ್ರಾಮಸ್ಥರ ಪರವಾಗಿ ಜೆಡಿಎಸ್ ಮುಖಂಡ ಸ.ಬ.ಭಾಸ್ಕರ್ ,ವಕೀಲ ಕವನ್ ಗೌಡ, ಭಾಸ್ಕರ್ ನಾಯ್ಡು, ಶೀನಪ್ಪ ಆಳ್ವ, ಹೆಚ್.ಡಿ.ಪಿ.ಎ.ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ಪತ್ರಕರ್ತ ಜಾನೆಕೆರೆ ಆರ್ ಪರಮೇಶ್, ಬಾಳ್ಳುಪೇಟೆ ಭರತ್ ಜೆಎಸ್ಎಸ್ ವಿದ್ಯಾಸಂಸ್ಥೆಯ ಅಧೀಕ್ಷಕ ಮಂಜುನಾಥ್, ಇತರರು ಮಾತನಾಡಿದರು.