ಹಾಸನ: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಎಫ್.ಸಿ. ಮತ್ತು ಇನ್ಸೂರೆನ್ಸ್ ರಿನಿವಲ್, ಟ್ಯಾಕ್ಸ್ ಹಾಗೂ ಕಾನೂನನ್ನು ಶಾಲೆಯ ಮಾಲೀಕರು ಹಾಗೂ ವಾಹನಗಳ ಮಾಲೀಕರು ಪಾಲಿಸದಿದ್ದರೇ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಆರ್.ಟಿ.ಓ. ಅಧಿಕಾರಿ ಮಲ್ಲೇಶ್ ಕಡಕ್ ಎಚ್ಚರಿಸಿದರು.
ತಮ್ಮ ಕಛೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ೮೭೭ ಶಾಲಾ ಬಸ್ಸುಗಳಿದ್ದು, ಎರಡು ತಿಂಗಳು ಶಾಲಾ ಕಾಲೇಜುಗಳಿಗೆ ರಜೆ ಇದ್ದುದರಿಂದ ವಾಹನದ ಡ್ರೈವಿಂಗ್ ಲೈಸೆನ್ಸ್ ಎಫ್.ಸಿ. ಮತ್ತು ಇನ್ಸೂರೆನ್ಸ್, ಟ್ಯಾಕ್ಸ್ ಇವೆಲ್ಲಾ ಅವಧಿ ಮುಗಿದು ಹೋಗಿರುತ್ತದೆ. ಎಲ್ಲಾವನ್ನು ತಪಾಸಣೆ ಮಾಡಿಸಿ ಶಾಲಾ ಮಾಲೀಕರು ಖಾತರಿ ಮಾಡಿಕೊಂಡು ಸರಿಯಾಗಿದ್ದರೇ ಶಾಲಾ ಮಕ್ಕಳನ್ನು ಕರೆತರಲು ವಾಹನ ಕಳುಹಿಸಬೇಕು. ಏನಾದರೂ ದುರ್ಘಟನೆ ನಡೆದರೇ ಎಲ್ಲಾರಿಗೂ ಕೆಟ್ಟ ಹೆಸರು ಬರುತ್ತದೆ. ಯಾವುದೇ ಒಂದು ಲೋಪ ವಾಗಿದ್ದರೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ.
ಈಗಾಗಲೇ ಎಲ್ಲೆಡೆ ಶಾಲೆಗಳು ಓಪನ್ ಆಗಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ಶಾಲಾ ಮಾಲೀಕರು ಎಚ್ಚರ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು ೮೭೭ ಶಾಲಾ ವಾಹನಗಳಿದ್ದು ಅವುಗಳ ಎಫ್ ಸಿ ಇನ್ಸೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಆಗದಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ಶಾಲಾ ಮಾಲೀಕರಿಗೆ ಮತ್ತು ಬಿಇ ಓ ಮತ್ತು ಡಿಡಿಪಿಐ ಅವರಿ ಪತ್ರದ ಮೂಲಕ ತಿಳಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶಾಲಾ ವಾಹನಗಳನ್ನು ತಪಾಸಣೆ ಕೈಗೊಳ್ಳುವುದರಿಂದ ಆ ಸಮಯದಲ್ಲಿ ಯಾವುದಾದರೂ ವಾಹನಗಳ ದಾಖಲಾತಿಗಳು ಸರಿ ಇಲ್ಲದಿದ್ದಲ್ಲಿ ತಕ್ಷಣವೇ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಎಚ್ಚರಿಸಿದರು. ಶಾಲಾ ವಾಹನಗಳು ವೇಗವಾಗಿ ಹೋಗುವುದು ಮತ್ತು ಸೀಟಿಗಿಂತ ಹೆಚ್ಚಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದರು.
೧೨ ವರ್ಷದ ಒಳಗೆ ಮಕ್ಕಳು ಇದ್ದರೇ ನಾಲ್ಕೈದು ಮಕ್ಕಳನ್ನು ಆಟೋದಲ್ಲಿ ಹಾಕಬಹುದು. ೧೨ ವರ್ಷ ಮೇಲ್ಪಟ್ಟವರು ಇದ್ದರೇ ಮೂರು ಜನರನ್ನು ಕೊಂಡೂಯ್ಯಲು ಅವಕಾಶವಿದೆ. ಇನ್ನು ಓಮಿನಿ ವಾಹನದಲ್ಲಿ ಎಷ್ಟು ಸೀಟಿನ ನಿಗಧಿಯಿದೆ ಅಷ್ಟೆ ಗ್ರಾಹಕರನ್ನು ಹಾಗೂ ಮಕ್ಕಳನ್ನು ಸಾಗಿಸಬೇಕು. ಹಳೆಯ ವಾಹನಗಳು ಇದ್ದು, ಏನಾದರೂ ಕಂಡು ಬಂದರೇ ಅಂತಹ ವಾಹನವನ್ನು ಸೀಜ್ ಮಾಡಲಾಗುವುದು.
ರಸ್ತೆ ಮೇಲೆ ಸಂಚರಿಸುವ ಅನೇಕ ವಾಹನಗಲ್ಲಿ ಹೆಚ್ಚಿನ ಹೊಗೆ ಬಿಟ್ಟು ಪರಿಸರ ಹಾಳು ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಕೆ.ಎಸ್.ಆರ್.ಟಿ.ಸಿ. ಇಲಾಖೆಗೂ ಸೂಚನೆ ಕೊಡಲಾಗಿದೆ.
ಇದೆ ರೀತಿ ಇತರೆ ವಾಹನದಲ್ಲಿ ಹೆಚ್ಚು ಹೊಗೆ ಉಗುಳುವುದು ಕಂಡು ಬಂದರೇ ಅಂತಹ ವಾಹನಗಳ ಮೇಲೆ ದಂಢ ಸಹಿತ ಕ್ರಮಕೈಗೊಳ್ಳಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಟಿ.ಓ. ಸೂಪರಿಂಟೆಂಡೆಂಟ್ ಕುಮಾರ್ ಇತರರು ಉಪಸ್ಥಿತರಿದ್ದರು.