ಸಕಲೇಶಪುರ : ಪಟ್ಟಣ ಹಾಗೂ ತಾಲೂಕಿನಾದ್ಯಂತ ದೊಡ್ಡ ನಗರ ಗ್ರಾಮ ವ್ಯಾಪ್ತಿ ಸೇರಿದಂತೆ ವಿವಿಧ ಗ್ರಾಮ ವ್ಯಾಪ್ತಿಯ ಹೇಮಾವತಿ ತೀರದಿಂದ ಮರಳು ದಂಧೆ ಕೋರರು ಅಕ್ರಮವಾಗಿ ಮರಳನ್ನು ತೆಗೆದು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರವಿಕಿರಣ್, ಹಾಗೂ ಸಿಬ್ಬಂದಿ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಪಿ ಡಬ್ಲ್ಯೂ ಡಿ ಇಲಾಖೆ ಅಧಿಕಾರಿಗಳು, ಮತ್ತು ಪೊಲೀಸ್ ಇಲಾಖೆಯವರು ಸೇರಿದಂತೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಮರಳನ್ನು ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂಗ್ರಹಣೆ ಮಾಡಲಾಗುತಿದೆ.
ಕೆಲವು ದಿನಗಳಿಂದ ಅನಧಿಕೃತವಾಗಿ ರಾತ್ರಿ ವೇಳೆ ಪಿಕಪ್ ಹಾಗೂ ಒಮಿನಿ ವಾಹನಗಳಲ್ಲಿ ಅನಾದಿಕೃತವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಿದಂತಿದೆ.