ಬೇಲೂರು.ಮೇ.೨೯“ಕಾಡಾನೆ ಹತ್ಯೆ –ತನಿಖೆಗೆ ಹಿಂದೇಟು-ಕೆಆರ್‌ಎಸ್ ಪಕ್ಷದಿಂದ ಪ್ರತಿಭಟನೆ” ;-ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮುರಗಿಹಳ್ಳಿಯಲ್ಲಿ ಕಳೆದ ೨೦೨೨ ರಲ್ಲಿ ಕಾಡಾನೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದ ಬಗ್ಗೆ ಪ್ರತಿಭಟನೆ ನಡೆದ ಬಳಿಕ ಕೇಸು ದಾಖಲೆ ಮಾಡಿದರೂ ಸೂಕ್ತ ತನಿಖೆ ನಡೆಸಲು ಸಂಬAಧ ಪಟ್ಟ ಇಲಾಖೆ ಮೀನಾ-ಮೇಷ ಎಣಿಸುತ್ತಿದೆ. ಇದ್ದರಿಂದ ಆರೋಪಿಗಳು ರಾಜರೋಷವಾಗಿ ಓಡಾಟ ನಡೆಸುತ್ತಿದ್ದಾರೆ.

ಶೀಘ್ರವೇ ಅರಣ್ಯ ಇಲಾಖೆ ಕಾಡಾನೆಯನ್ನು ಗುಂಡಿಕ್ಕಿ ಹತ್ಯಗೈದ ವ್ಯಕ್ತಿಯ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಬೇಲೂರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ತಾಲ್ಲೂಕು ಕೆಆರ್‌ಎಸ್ ಪಕ್ಷ ಅಧ್ಯಕ್ಷ ಆದೇಶ್, ದಿನಾಂಕ-೨೭-೦೫-೨೦೨೨ ರಲ್ಲಿ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಮುರಗಿಹಳ್ಳಿಯಲ್ಲಿ ಕಾಡಾನೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವಿಷಯ ಎಲ್ಲಾ ಪತ್ರಿಕೆಯಲ್ಲಿ ವರದಿಯಾಗಿತ್ತು.

ಹತ್ಯೆಗೈದವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸಂದರ್ಭದಲ್ಲಿ ಹತ್ಯೆಗೈದ ವ್ಯಕ್ತಿಯ ಮೇಲೆ ಕೇಸು ದಾಖಲೆ ಮಾಡಲಾಗಿದೆ. ಇಷ್ಟಾದರೂ ಸಂಬAಧ ಪಟ್ಟ ಇಲಾಖೆ ಕಳೆದ ಎರಡು ವರ್ಷದಿಂದ ಪ್ರಕರಣದ ಸಾರಂಶವನ್ನು ನ್ಯಾಯಾಲಯಕ್ಕೆ ನೀಡುವಲ್ಲಿ ಸಂಪೂರ್ಣ ವೈಪಲ್ಯವಾಗಿದೆ. ಕೇಳಿದರೆ ಇಲ್ಲ-ಸಲ್ಲದ ಸಬೂಬು ಹೇಳುತ್ತಾರೆ.

ಒಂದು ಪ್ರಕರಣದ ಸಾರಂಶವನ್ನು ನ್ಯಾಯಾಲಯಕ್ಕೆ ನೀಡಲು ಎರಡು ವರ್ಷ ಬೇಕಾದರೆ ಇಂತಹ ಹತ್ಯೆ ಪ್ರಕರಣಕ್ಕೆ ಎಂದಿಗೆ ಮುಕ್ತಿ ಕಾಣಿಸುವುದು ಎಂಬ ಪ್ರಶ್ನೆ ಕಾಡುತ್ತಿದೆ. ಇಲಾಖೆ ಪ್ರಭಾವಿಗಳನ್ನು ರಕ್ಷಣೆಗೆ ಮುಂದಾಗಿರುವ ಅನುಮಾನ ಕಾಣಿಸುತ್ತಿದೆ. ಇದೇ ರೀತಿಯಲ್ಲಿಯೇ ಕಾಡಾನೆ ಸೆರೆ ಬಂದ ಅರ್ಜನ ಎಂಬ ಆನೆಹತ್ಯೆಯಾದ ಬಳಿಕ ಇಲಾಖೆ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ.

ಹೀಗೆ ರಾಜ್ಯದಲ್ಲಿ ವನ್ಯಜೀವಗಳ ಮರಣ ಹೊಮ ನಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಹಾಗೂ ಅರಣ್ಯ ಮಂತ್ರಿಗಳು ಜಾಣ ಮೌನಕ್ಕೆ ಜಾರಿದ್ದು ನಿಜಕ್ಕೂ ಶೋಚನೀಯವೆಂದು ಕಿಡಿ ಕಾರಿದರು.

ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿ ಶ್ರೀನಿವಾಶ್, ಹಾಸನ ಜಿಲ್ಲಾ ಕಾರ್ಯದರ್ಶಿ ಹರ್ಷ, ತಾಲ್ಲೂಕು ಉಪಾಧ್ಯಕ್ಷ ಸುನೀಲ್, ಜಾವಗಲ್ ಹೋಬಳಿ ಅಧ್ಯಕ್ಷ ಸುರೇಶ್, ಹಳೇಬೀಡು ಹೋಬಳಿ ಅಧ್ಯಕ್ಷ ಸೋಮಶೇಖರ್, ಸಂಘಟನೆಯ ಕಾರ್ಯದರ್ಶಿ ರಿಯಾಜ್ ಅಹಮದ್, ಅನಿಲ್ ಇನ್ನು ಮುಂತಾದವರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *