ಬೇಲೂರು : ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು ತಾಲೂಕಿನ ಹಳೆಬೀಡು ಹೋಬಳಿಯ ನರಸೀಪುರ ಭೋವಿ ಕಾಲೀನಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿಗಷ್ಟೇ ಆಲೂರಿನಲ್ಲಿ ಮೂವರು ಮಕ್ಕಳು ಈಜಲು ಹೋಗಿ ಸಾವನ್ನಪ್ಪಿದ ಘಟನೆ ಮಾಸುವ ಮುಂಚೆಯೆ ತಾಲೂಕಿನ ಹಳೆಬೀಡು ಹೋಬಳಿಯಲ್ಲಿ ನಡೆದಿರುವುದು ನಿಜಕ್ಕೂ ದುರಾದೃಷ್ಟಕರವಾಗಿದೆ.

ನರಸೀಪುರ ಗ್ರಾಮದ ಜಯಣ್ಣ ಅವರ ಮಕ್ಕಳಾದ ದೀಕ್ಷಿತ್ 10 ವರ್ಷ,ನಿತ್ಯಶ್ರೀ 12 ವರ್ಷ ಹಾಗೂ ಅವರ ಸಂಬಂಧಿಕರಾದ ಜಾವಗಲ್ ಹೋಬಳಿಯ ದೊಡ್ಡ ಕರಬೋರನಹಟ್ಟಿ ಹಾಲಪ್ಪನವರ ಮಗಳು ಕುಸುಮ ೬ ವರ್ಷ ಇವರು ಕೆರೆಯಲ್ಲಿ ಈಜಲು ಹೋದ ಸಂದರ್ಭದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕುಟುಂಬಸ್ಥರು ಸಂಬಂಧಿಕರ ಮದುವೆಗೆ ಬಟ್ಟೆ ತರಲು ಹಳೆಬೀಡಿಗೆ ಹೋಗಿದ್ದ ಸಂದರ್ಭಗಳಲ್ಲಿ ಮನೆಯಲ್ಲೇ ಆಟವಾಡುತ್ತಿದ್ದ ಮಕ್ಕಳು ಮನೆಯ ಸಮೀಪದಲ್ಲಿ ಇರುವ ಕೆರೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಕ್ಕಳು ನೀರಿನಲ್ಲಿ ಮುಳುಗಿದ ವಿಷಯ ತಿಳಿದು ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ.

ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ,ಅಪಾರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು,ತಹಸೀಲ್ದಾರ್ ಎಂ ಮಮತಾ ,ಡಿವೈಎಸ್ ಪಿ ಲೊಕೇಶ್,ಹಾಗು ವ್ರತ್ತ ನಿರೀಕ್ಷಕ ಜಯರಾಂ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಹಳೆಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *