ಹಾಸನ : ಯೋಗ ದೇಹ ಹಾಗೂ ಮನಸಿನ ನಡುವೆ ಸಮತೋಲನ ಕಾಯ್ದುಕೊಂಡು ಆರೋಗ್ಯ ರಕ್ಷಣೆಗೆ ಸಹಕಾರಿ ಆಗಿದೆ ಎಂದು ಸಾಹಿತಿ ಸುಶೀಲ ಸೋಮಶೇಖರ್ ಹೇಳಿದರು.
ಹಾಸನ ಜಿಲ್ಲಾ ಯೋಗ ಸಂಸ್ಥೆ ವತಿಯಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಕುರುಹಿನ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯೋಗಾಸನಗಳ ಸ್ಪರ್ಧೆ ಗೆ ಚಾಲನೆ ನೀಡಿ ಮಾತನಾಡಿದ ಅವರು,ಇಡೀ ಪ್ರಪಂಚವೇ ಭಾರತ ದೇಶದ ಮೂಲದ ಯೋಗವನ್ನು ಅನುಸರಿಸುತ್ತಿದೆ ಜೊತೆಗೆ ಅಳವಡಿಸಿಕೊಂಡಿದೆ, ಇದೊಂದು ಹೆಮ್ಮೆಯ ವಿಚಾರ ಅದರಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಎಲ್ಲ ವಯಸ್ಸಿನವರು ದಿನನಿತ್ಯ ಯೋಗ ಅಳವಡಿಕೊಂಡಲ್ಲಿ ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯ ಎಂದರು.
ಇದೆ ವೇಳೆ ಜಿಲ್ಲಾ ಕುರುಹಿನ ಶೆಟ್ಟಿ ಸಂಘದ ಅದ್ಯಕ್ಷ ಕೆ.ಹೆಚ್. ನಾರಾಯಣಶೆಟ್ಟಿ, ನಗರಸಭೆ ಸದಸ್ಯ ಚಂದ್ರೇಗೌಡ, ಜಿಲ್ಲಾ ಪಂಜಕುಸ್ತಿ ಅಧ್ಯಕ್ಷ ಗಿರಿಗೌಡ, ಜಿಲ್ಲಾ ಯೋಗ ಸಂಸ್ಥೆ ಅಧ್ಯಕ್ಷ ಡಿ. ಗಿಡ್ಡೇಗೌಡ, ಅಮೇಚೂರು ಬಾಡಿ ಬಿಲ್ಡರ್ಸ್ ಸಂಸ್ಥೆಯ ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.