ಹಾಸನ: ಡೆಂಗ್ಯೂ ಜ್ವರ ಹೆಚ್ಚಾಗಿರುವುದರಿಂದ ಕಡಿಮೆ ಮಾಡಲು ವಾರಕ್ಕೊಮ್ಮೆ ಪ್ರತಿ ಶುಕ್ರವಾರ ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾ ಅಧಿಕಾರಿ ಶಿವಸ್ವಾಮಿ ತಿಳಿಸಿದರು.

ನಗರದ ಪೆನ್ಷನ್ ಮೊಹಲ್ಲಾಕ್ಕೆ ತೆರಳಿ ಅಲ್ಲಿನ ಜನರಿಗೆ ಸೊಳ್ಳೆಯಿಂದ ಉತ್ಪತ್ತಿಯಾಗುವ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರದಿಂದ ಇರಲು ಜಾಗರತಿ ಮೂಡಿಸುವ ಸಲುವಾಗಿ ಕರಪತ್ರ ಪ್ರದರ್ಶಿಸಿ ನಂತರ ಮಾತನಾಡಿದ ಅವರು,ಡೆಂಗ್ಯೂ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿದ್ದು, ಕಡಿಮೆ ಮಾಡಲು ವಾರಕ್ಕೊಮ್ಮೆ ನಾಶ ಮಾಡುವ ದಿನ ಎಂದು ಶುಕ್ರವಾರದಂದು ಆಚರಿಸುತ್ತಿದ್ದೇವೆ.

ಡೊಂಗ್ಯೂ ಪ್ರಕರಣ ಹೆಚಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳೆ ಸಾಕಾಗುತ್ತಿಲ್ಲ. ಈ ಖಾಯಿಲೆ ಬಂದ ಮೇಲೆ ಸಾವು ನೋವುಗಳು ಕೂಡ ಸಂಭವಿಸಬಹುದು. ಹಳ್ಳಿಯಿಂದ ಪಟ್ಟಣದವರೆಗೂ ಎಲ್ಲಾ ಹಂತದಲ್ಲೂ ಸಹ ಎಚ್ಚರಿಕೆಯಿಂದ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದರು.

ಬೀದಿ ಬದಿ ಕ್ಯಾಂಟಿನ್ ಗಳು ಹೆಚ್ಚಾಗಿದ್ದು, ಫುಡ್ ಪಾರ್ಕ್‌ಗಳು ಹೆಚ್ಚಾಗಿದ್ದು, ಎಳ ನೀರನ್ನು ಕೊಚ್ಚಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇನ್ನು ಹಳ್ಳಿಗಳಲ್ಲಿ ಕೊಬರಿ ಹೊಡೆದು ಅದರ ಚಿಪ್ಪುಗಳನ್ನು ತಿಂಗಳು ಗಟ್ಟಲೆ ಅಲ್ಲೆ ಬಿಟ್ಟಿರುತ್ತಾರೆ. ಹೊಡೆದು ಹೋದ ಮಡಿಕೆ, ಪ್ಲಾಸ್ಟಿಕ್, ಟೈರ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಮತ್ತು ಚರಂಡಿಗಳಲ್ಲಿ ತಿಂಗಳುಗಟ್ಟಲೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನುಉತ್ಪತ್ತಿ ಹೆಚ್ಚಾಗಿ ಸೊಳ್ಳೆಯಿಂದ ಡೆಂಗೀ ಹರಡುತ್ತದೆ ಎಂದು ಎಚ್ಚರಿಸಿದರು.

ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಡುವುದರಿಂದ ನೀರು ನಿಲ್ಲದಾಗೆ ನೋಡಿಕೊಂಡರೇ ಸೊಳ್ಳೆಗಳ ಜನನವನ್ನು ತಡೆಯಬಹುದು. ಇದರಿಂದ ಸಾವು ನೋವನ್ನು ಕೂಡ ಕಡಿಮೆ ಮಾಡಬಹುದು. ಇಂತಹ ಕೆಲಸವನ್ನು ನಮ್ಮ ಒಂದು ಇಲಾಖೆಯಿಂದ ಸಾಧ್ಯವಿಲ್ಲ. ಹಲವಾರು ಇಲಾಖೆಗಳು ಕೈಜೋಡಿಸುವ ಮೂಲಕ ಅವರಿಗೆ ಆರೋಗ್ಯದ ಬಗ್ಗೆ ತರಬೇತಿ ನೀಡಿ ಅರಿವು ಮೂಡಿಸಿ ತಡೆಗಟ್ಟಿದರೇ ಮಾತ್ರ ಈ ರೋಗದಿಂದ ಮುಕ್ತಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ನಗರಸಭೆ ಸದಸ್ಯರಾದ ರಫೀಕ್ ಮಾತನಾಡಿ, ಜಿಲ್ಲಾ ಆರೋಗ್ಯ ಇಲಾಖೆಯಿಂದ ಡಿ.ಹೆಚ್.ಓ. ಅಧಿಕಾರಿಗಳು ಹಾಗೂ ಅವರ ತಂಡವು ಪೆನ್ಷನ್ ಮೊಹಲ್ಲಾ ಭಾಗಕ್ಕೆ ಬಂದಿದ್ದು, ಡೆಂಗ್ಯೂ ಜ್ವರದ ಬಗ್ಗೆ ಒಂದು ಜಾಗೃತಿ ಮೂಡಿಸಲು ಆಗಮಿಸಿದ್ದು, ನಾವುಗಳೆಲ್ಲಾ ಸಹಕಾರ ಇದ್ದೆ ಇರುತ್ತದೆ. ನಮ್ಮ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆಯಿಂದ ಅಧಿಕಾರಿಗಳು ಆಗಮಿಸಿದ್ದು, ಜನರು ಕೂಡ ಇದಕ್ಕೆ ಸಹಕಾರಿಸಬೇಕೆಂದು ಮನವಿ ಮಾಡಿದರು. ಈಗಾಗಲೇ ಡೆಂಗ್ಯೂ ಪ್ರಕರಣ ದಿನೆ ದಿನೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕೆಂದರು.

ಇದೆ ವೇಳೆ ಜಿಲ್ಲಾಧಿಕಾರಿಗಳ ಕಛೇರಿ ಆವರಣ ಸೇರಿದಂತೆ ಇತರೆ ಭಾಗಗಳಿಗೆ ತೆರಳಿ ಕರಪತ್ರ ಪ್ರದರ್ಶಿಸಿ ಡೊಂಗ್ಯೂ ಬಗ್ಗೆ ಅರಿವು ಮೂಡಿಸಲಾಯಿತು.

ಇದೆ ಸಂದರ್ಭದಲ್ಲಿ ಚರಂಡಿ, ಟೈರ್, ತೊಟ್ಟಿ ಸೇರಿದಂತೆ ಎಲ್ಲೆಲ್ಲಿ ನೀರು ನಿಂತಿದೆ ಆ ಸ್ಥಳಕ್ಕೆ ತಾವೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *