ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸೋಮವಾರ ಮಕ್ಕಳ ಶಾಲಾ ಸಂಸತ್ತು ರಚನೆ ಮಾಡಿ ಪದಗ್ರಹಣ ಮತ್ತು ತಮ್ಮ ಖಾತೆಯನ್ನು ವಹಿಸಿಕೊಂಡ ಪ್ರಮಾಣವಚನವನ್ನು ಸ್ವೀಕರಿಸಲಾಯಿತು .

ಇದರ ಉದ್ದೇಶ ಏನೆಂದರೆ ಶೈಕ್ಷಣಿಕ ಪ್ರಗತಿ ಮತ್ತು ಸ್ವಚ್ಚತೆ ಸಮಾಜದ ಬಗ್ಗೆ ಮಕ್ಕಳ ತಿಳುವಳಿಕೆ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಗಳಾದರೆ ದೇಶವನ್ನು ಹಾಗೂ ರಾಜ್ಯವನ್ನು ಹೇಗೆ ಅಭಿವೃದ್ಧಿಪಡಿಸುವುದು.

ಸಂಸದರು ಮತ್ತು ಶಾಸಕರು ಹೇಗೆ ಅವರ ಜಿಲ್ಲೆಗಳು ಮತ್ತು ತಾಲೂಕುಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಸರ್ಕಾರಿ ಶಾಲೆಯ ಮಕ್ಕಳನ್ನೇ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಕೆಲ ಇಲಾಖೆಯ ಸಚಿವರನ್ನಾಗಿ ಮಾಡಿ ಮಕ್ಕಳಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ರೆನ್ನಿಮಿನೇಜರ್, ಶಿಕ್ಷಕಿಯರಾದ ಅಮೀನ , ಪಲ್ಲವಿ , ಶೃತಿ, ಅಡುಗೆ ಸಹಾಯಕಿಯರಾದ ನಂದಿನಿ, ಸುನಿತಾ ,ಇತರರು ಉಪಸ್ಥಿತರಿದ್ದರು .

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *