ಸಂಸತ್ ಪ್ರತಿಪಕ್ಷದ ನಾಯಕನಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ತಾನು ನಿಂತು ಮಾತಾಡುತ್ತಿರುವ ಸಂಸತ್ ಭವನ ಅಂದರೆ ಏನು ಅಂತ ಅರಿವೇ ಇಲ್ಲದ ರೀತಿಯಲ್ಲಿ ಮಾತನಾಡುತ್ತಿರುವುದು ಲೋಕತಂತ್ರಕ್ಕೆ ಮಾಡಿದ ಅವಮಾನವಾಗಿದೆ.

ಹಿಂದೂ ಎಂದು ಹಿಂಸೆಯನ್ನ ಪ್ರತಿಪಾದನೆ ಮಾಡುವುದಿಲ್ಲ ಆದರೆ ರಾಹುಲ್ ವಿಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲಿ ಹಿಂದೂಗಳು ಹಿಂಸೆ ಮತ್ತು ದ್ವೇಷ ಮಾಡುತ್ತಾರೆ ಎಂದು ಹೇಳಿಕೆ ನೀಡಿರುವುದು ಖಂಡನೀಯ..

ಕೇರಳದ ವಯನಾಡು ಸಂಸದನಾಗಿರುವ ರಾಹುಲ್ ಅಲ್ಲಿಯ ಮುಸ್ಲಿಮರ ಜೊತೆ ಚುನಾವಣಾ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಪ್ಪಂದದಂತೆ ಹಿಂದೂ ಸಮಾಜವನ್ನ ಸಂಸದ್ ನಲ್ಲಿ ಅವಮಾನ ಮಾಡುತ್ತೇನೆ ಎಂಬುದನ್ನ ಸಾಬೀತು ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಇರುವ ಹಿಂದೂ ಕಾರ್ಯಕರ್ತರಿಗೆ ಮುಖಂಡರಿಗೆ ಅವಮಾನ ಮಾಡಿರುವ ರಾಹುಲ್ ವಿರುದ್ಧ ಧ್ವನಿ ಎತ್ತಬೇಕು.

ಮುಸ್ಲಿಂ ಓಲೈಕೆ ತುಷ್ಟಿಕರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ನಾಯಕರು ಧ್ವನಿ ಎತ್ತಲೇಬೇಕು ಎಂದು ಆಗ್ರಹಿಸುತ್ತೇನೆ.

ಭಾರತ ಮುಸ್ಲಿಂ ರಾಜ್ಯವಾದರೆ ಕಾಂಗ್ರೆಸ್ ನಾಯಕರೇ ಕಾರ್ಯಕರ್ತರೇ ನಿಮ್ಮ ರಾಹುಲ್ ಆ ಸಮಯದಲ್ಲಿ ನಿಮ್ಮ ಜೊತೆ ಇರುವುದಿಲ್ಲ ಇಟಲಿಯಲ್ಲಿ ಕೂತಿರುತ್ತಾರೆ ಎಂಬುದನ್ನ ಮರಿಯಬೇಡಿ ಎಂದು ಈ ಸಂದರ್ಭದಲ್ಲಿ ಹೇಳಲು ಇಚ್ಚಿಸುತ್ತೇನೆ.

ಶಿವ ಭಕ್ತರಿಗೆ ಅವಮಾನ ಮಾಡಿ ಈಶ್ವರನ ತ್ರಿಶೂಲದ ಬಗ್ಗೆ ಅವಹೇಳನ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ತಕ್ಷಣ ಶಿವಭಕ್ತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ರಘು ಸಕಲೇಶಪುರ.

ಪ್ರಜಾಪ್ರಭುತ್ವದ ವಿರೋಧಿ ಮತ್ತು ಸಂವಿಂಧಾನದ ನಿಯಮ ಉಲ್ಲಂಘನೆ ಮಾಡಿ ಮಾತನಾಡಿರುವ ರಾಹುಲ್ ವಿರುದ್ಧ ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *