
ಸಕಲೇಶಪುರ : ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದಹೆನ್ನಲಿ ಗ್ರಾಮದ ಹತ್ತಿರದಲ್ಲಿ ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಂ ಬಾಗಿಲು ಕಟ್ಟೆಯ ಮೇಲೆ ಮೀನು ಹಿಡಿಯುವವರ ಉಚ್ಚಾಟ ಮಾಡುತ್ತಿದ್ದಾರೆ.
ಮೀನು ಹಿಡಿಯಲು ಸುತ್ತಮುತ್ತ ಹಳ್ಳಿಗಳಿಂದ ಬರುತ್ತಿರುವ ಜನರು ನೇರ ಚೆಕ್ ಡ್ಯಾಂ ಬಾಗಿಲು ಕಟ್ಟೆಯ ಮೇಲೆ ಹತ್ತಿ ಹಲವು ದಿನಗಳಿಂದ ಮೀನು ಹಿಡಿಯುತ್ತಿದ್ದು, ಮಳೆಗಾಲದಲ್ಲಿ ಹೇಮಾವತಿ ನದಿ ನೀರು ಜಾಸ್ತಿಯಾಗುತ್ತಿರುವುದರಿಂದ ನೀರು ಹೆಚ್ಚಾಗಿ ಕಟ್ಟೆಯ ಮೇಲೆ ಪಾಚಿ ಕಟ್ಟಿರುತ್ತದೆ. ಆದರೂ ಆ ಕಟ್ಟೆ ಮೇಲೆ ನಿಂತು ಮೀನು ಹಿಡಿಯಲು ಅರಸಹಾಸ ಪಡುತ್ತಿದ್ದಾರೆ.
ಏನಾದರೂ ಹೆಚ್ಚು ಕಡಿಮೆ ಆದರೆ ಇದಕ್ಕೆಲ್ಲ ಯಾರು ಹೊಣೆ.
ದಯಮಾಡಿ ಸಕಲೇಶಪುರ ತಾಲ್ಲೂಕು ಪುರಸಭೆ ಆಡಳಿತ ಅಧಿಕಾರಿಗಳು ಇದಕ್ಕೆ ಸೂಕ್ತ ಕಡಿವಾಣ ಹಾಕಬೇಕಾಗಿದೆ . ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಯಾರನ್ನ ಹೊಣೆ ಮಾಡುತ್ತಿರಾ.
ದಯಮಾಡಿ ಪುರಸಭೆ ಆಡಳಿತ ಅಧಿಕಾರಿಗಳು ಇದಕೆಲ್ಲ ಸೂಕ್ತ ಕಾನೂನು ಕ್ರಮ ಕೈಗೊಲ್ಲಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಶಶಿಕುಮಾರ್ ಹೆನ್ನಲಿರವರು ತಮ್ಮ ಅಳಲು ತೋಡಿಕೊಂಡಿದ್ದಾರೆ.