ಸಕಲೇಶಪುರ : ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಇಂದು ಬೆಳಗ್ಗೆ 63 ಜನರ ತಂಡ ಮಹಾರಾಷ್ಟ್ರದ ಜಲಗಾವ್ ಗೆ ಕೃಷಿ ಅಧ್ಯಯನ ಪ್ರವಾಸ ಕೈಕೊಂಡಿತು, ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಸಕಲೇಶಪುರ ಉಪವಿಭಾಗದ ಉಪ ವಿಭಾಗಧಿಕಾರಿ ಡಾಕ್ಟರ್ ಶ್ರುತಿಯವರು ಪ್ರವಾಸಕ್ಕೆ ಶುಭಕೋರಿದರು.

ಪ್ರವಾಸ ತಂಡದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಸಕಲೇಶಪುರ, ಆಲೂರು ಬೇಲೂರು ಅರಕಲಗೂಡು ಸಂಘದ ಸದಸ್ಯರುಗಳು, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಲೋಹಿತ್, ಉಪಾಧ್ಯಕ್ಷ ಮಂಜುನಾಥ್ ಖಜಾಂಚಿ ಸಚಿನ್, ಅರುಣ್ ಅರಕಲಗೂಡು, ಕೃಷ್ಣ ಮೂರ್ತಿ ಖಂಡಿಗೆ, ಗಿರೀಶ್, ಡಾಕ್ಟರ್ ಮೋಹನ್ ಕುಮಾರ್, ಕಾಫಿ ಮಂಡಳಿಯ ಉಪ ನಿರ್ದೇಶಕ ಶಕ್ತಿ ಯವರು ಹಾಗೂ ಇತರ ಬೆಳೆಗರಾರು ಸಕಲೇಶಪುರ ಕಚೇರಿ ಯಿಂದ ಬೆಂಗಳೂರುಗೆ ಬಸ್ ನಲ್ಲಿ ಹಾಗೂ ಬೆಂಗಳೂರುನಿಂದ ವಿಮಾನ ದಲ್ಲಿ ಪ್ರಯಾಣಿಸುತಿದ್ದು, ಜಲಾಗನ್ ನಲ್ಲಿ ಜೈನ್ ಇರಿಗೇಶನ್, ಹಾಗೂ ಕಾಫಿ ಮತ್ತು ಕಾಲುಮೆಣಸಿನ ಟಿಶು ಕಲ್ಚರ್ ಕೃಷಿಯನ್ನು ನೋಡಿ ಶನಿವಾರ ವಾಪಾಸ್ ಅಗಲಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *