
ಬೇಲೂರು : ಕನ್ನಡ ಚಿತ್ರರಂಗದ ಮೇರುನಟರವರ ಸುಪುತ್ರರಾಗಿ ಜನಿಸಿ, ಸಣ್ಣ ವಯಸ್ಸಿನಲ್ಲಿಯೇ ಅಪ್ರತಿಮಾ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ದೃವತಾರೆಯಂತೆ ಮಿಂಚಿದ ದಿ.ಪುನೀತ್‌ರಾಜಕುಮಾರ್ ನಟನೆ ಜೊತೆಗೆ ಸಮಾಜಮುಖಿ ಮತ್ತು ಜನಪರ ಕೆಲಸ ಮಾಡಿದ ಹಿನ್ನಲೆಯಲ್ಲಿ ಅವರು ಅಪಾರವಾದ ಅಭಿಮಾನಿ ವರ್ಗದವವನ್ನು ಹೊಂದಿದ ಚಿತ್ರನಟ ಪುನೀತ್‌ರಾಜಕುಮಾರ್ ಪುತ್ಥಳಿಯನ್ನು ಬೇಲೂರಿನಲ್ಲಿ ಶೀಘ್ರವೇ ಸ್ಥಾಪನೆ ಮಾಡಲಾಗುತ್ತದೆ ಎಂದು ಬೇಲೂರು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪಟ್ಟಣದ ಬಸ್‌ನಿಲ್ದಾಣದ ಮುಂದಿನ ಬಸವೇಶ್ವರ ವೃತ್ತ ಬಳಿಯಲ್ಲಿ ಡಾ.ರಾಜಕುಮಾರ್ ಅಭಿಮಾನಿ ಸಂಘ, ದಿ.ಪುನೀತ್‌ರಾಜಕುಮಾರ್ ಅಭಿಮಾನಿ ಸಂಘದಿಂದ ಹಮ್ಮಿಕೊಂಡ ಪುನೀತ್‌ರಾಜಕುಮಾರ್ ಮೂರನೇ ವರ್ಷ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು ಕನ್ನಡ ಚಿತ್ರರಂಗದಲ್ಲಿ ದಿ.ಪುನೀತ್‌ರಾಜಕುಮಾರ್ ಹೆಸರು ಚಿರಿತ್ರೆಯ ಪುಟದಲ್ಲಿ ದಾಖಲಿಸಿದೆ. ಕಾರಣ ಅವರಲ್ಲಿನ ಸರಳತೆ ಮತ್ತು ಸೌಜನ್ಯತೆ ಜೊತೆಗೆ ಉಪಕಾರದ ಮನೋಭಾವನೆ ಹಾಗೇಯೆ ಆಗಾದ ನಟನೆಯಿಂದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.
ಇಂತಹ ನಟ ಇಲ್ಲದಿದ್ದರೂ ಅಭಿಮಾನಿಗಳು ಪ್ರತಿ ವರ್ಷ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ನಡೆಸುತ್ತಿರುವುದು ನಮಗೆ ಸಂತೋಷ ತಂದಿದೆ.
ಈಗಾಗಲೇ ಬೇಲೂರು ಪಟ್ಟಣದಲ್ಲಿ ಪುನೀತ್‌ರಾಜಕುಮಾರ್ ಪುತ್ಥಳಿ ಸ್ಥಾಪಿಸಬೇಕು ಎಂದು ಪುರಸಭಾ ಮಾಜಿ ಅಧ್ಯಕ್ಷರಾದ ತೀರ್ಥಕುಮಾರಿ ವೆಂಕಟೇಶ್ ಅಧಿಕಾರ ಅವಧಿಯಲ್ಲಿ ಶುಂಕುಸ್ಥಾಪನೆ ನಡೆಸಲಾಗಿತ್ತು. ಮತ್ತು ಸ್ವತಂ ಪುನೀತ್‌ರಾಜಕುಮಾರ್ ಪುತ್ಥಳಿಯನ್ನು ಈಗಾಗಲೇ ಸಿದ್ದತೆ ಮಾಡಿಕೊಂಡು ಎಂ.ಆರ್,ವೆಂಕಟೇಶ್ ಗೃಹದಲ್ಲಿದೆ.
ಈ ಹಿನ್ನಲೆಯಲ್ಲಿ ನಾನು ಅವರ ಬಳಿ ಮಾತನಾಡಿ, ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್‌ರಾಜಕುಮಾರ್ ಪುತ್ಥಳಿಯನ್ನು ಸ್ಥಾಪಿಸಿ ಉದ್ಘಾಟನೆ ನಡೆಸಲಾಗುತ್ತದೆ ಎಂದರು.
ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ,ಚಂದನವನದ ದೃವತಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುನೀತ್‌ರಾಜಕುಮಾರ್ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಮುಖ ನಟರು. ಅವರು ಆಕಾಲಿಕ ಮರಣ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ನೀಡಿದೆ. ಅವರು ತಮ್ಮ ಬದುಕಿನಲ್ಲಿ ನಡೆದುಕೊಂಡ ಅದರ್ಶ ಜೀವನ ಇನ್ನಿತರರು ಅಳವಡಿಸಿಕೊಳ್ಳಬೇಕಿದೆ. ವಿಶೇಷವಾಗಿ ಕರ್ನಾಟಕ ಸರ್ಕಾರ ಪುನೀತ್‌ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಜೊತೆಗೆ ಆರೋಗ್ಯ ಇಲಾಖೆಯಲ್ಲಿ ಅವರ ಹೆಸರಿನಲ್ಲಿ ಯೋಜನೆ ರೂಪಿಸಿ ಜನಮನದಲ್ಲಿ ಉಳಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈಗಾಗಲೇ ಪುರಸಭಾ ಅಧ್ಯಕ್ಷ ಪುನೀತ್‌ರಾಜಕುಮಾರ್ ಪುತ್ಥಳಿ ಸ್ಥಾಪನೆ ಬಗ್ಗೆ ತಿಳಿಸಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿ. ಪುನೀತ್‌ರಾಜಕುಮಾರ್ ಅಭಿಮಾನಿ ಸಂಘದ ಪದಾಧಿಕಾರಿಗಳಾದ ರಾಜು ಸಮುಖ, ನವೀನ್ .ಮಾಳೇಗೆರೆ ತಾರಾನಾಥ್, ಸುಬ್ರಮಣ್ಯ, ಪುರಸಭಾ ಸದಸ್ಯ ಆಶೋಕ್ ಸೇರಿದಂತೆ ಇನ್ನುಮುಂತಾದವರು ಹಾಜರಿದ್ದ ಪುಣ್ಯ ಸ್ಮರಣೆಯಲ್ಲಿ ಅಭಿಮಾನಿಗಳಿಗೆ ಲಘು ಉಪಹಾರ ವಿತರಿಸಲಾಯಿತು.



