
ಹಳೇಬೀಡು : ಅಡಗೂರು ಗ್ರಾಮದಲ್ಲಿ ಸುಮಾರು ಮೂರು ವರ್ಷದಿಂದ ಯಾರ ಆಸರೆ ಇಲ್ಲದೆ ಹಸಿವಿನಿಂದ ಬಳತಿದ್ದ, ವೃದ್ದೆ ಕರಿಯಮ್ಮರನ್ನು ವಾರದ ಹಿಂದೆ ಬೇಲೂರು ತಹಶೀಲ್ದಾರ್ ಮಮತಾ ರವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ನಡೆಸಿ ಸಂಬಂಧಿಕರನ್ನು ಕರೆಸಿ ಬುದ್ಧಿವಾದ ಹೇಳಿದ್ದರು.
ಆದರೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಸಂಬಂಧಿಕರು ಉಡಾಫೆಯಿಂದ ವರ್ತಿಸುವು ದನ್ನು ಮನಗಂಡು ಮಾನವೀಯ ದೃಷ್ಟಿಯಿಂದ ತಾಲ್ಲೂಕು ಆಡಳಿತ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರ ಸಹಯೋಗದೊಂದಿಗೆ ಕರಿಯಮ್ಮ ರವರನ್ನು ಬೆಂಗಳೂರಿನ ಜನಧನಿ ಸೇವಾ ಟ್ರಸ್ಟ್ ಅನಾಥಾಶ್ರಮಕ್ಕೆ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಬೇಲೂರು ತಾಲ್ಲೂಕು, ದಂಡಾಧಿಕಾರಿ ಮಮತಾ, 24X7 ಸಮಾಜ ಸೇವ ತಂಡದ ಸಂಸ್ಥಾಪಕ ಅಧ್ಯಕ್ಷ ನೂರ್ ಅಹಮದ್, ಶಿಕ್ಷಕ ಸಂಪತ್, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ವಿಜಯ್ ಕುಮಾರ್ ಸಂತೋಷ್, ಪ್ರತಾಪ್ ಚಂದ್ರು, ಸುರೇಶ್,ಆನಂದ್ ಹಾಗೂ ಅದಿಕಾರಿ ವರ್ಗದವರು ಗ್ರಾಮದ ಮಹಿಳೆಯರು. ಹಾಜರಿದ್ದರು.


