ಹಾಸನ : ಅಯ್ಯೋ ಹಾಸನಾಂಬೆ ನಿನ್ನ ದರ್ಶನ ಪಡೆಯಲು ನರಕಯಾತನೆ ಅನುಭವಿಸುವಂತೆ ಮಾಡಿಬಿಟ್ಟರಲ್ಲ. ನಿನ್ನ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಇಳಿದರಲ್ಲಾ. ದೊಡ್ಡ ದೊಡ್ಡವರಿಗೆ ಮಾತ್ರ ಸೀಮಿತವಾದೆಯ ತಾಯಿ.

ಈ ರೀತಿ ನಿನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರಲ್ಲ. ಅವರ ತೆವಲಿಗೆ ಸಿಎಂ ಇಂದ ಹಿಡಿದು ಸಚಿವರು, ಶಾಸಕರವೆರೆಗೆ ಹೊಗಳಿಸಿಕೊಳ್ಳಲು ಮಾಡಬಾರದನ್ನೇ ಮಾಡುತ್ತಿದ್ದಾರೆ. ಭಕ್ತರ ನೋವಿನ ಕೂಗು ನಿನಗೆ ಕೇಳಿಸುತ್ತಿಲ್ಲವೇ.

ನ್ಯಾಯ ಕೊಡುವ ನ್ಯಾಯಧೀಶರಿಗೆಗೆ ನೇರ ದರ್ಶನವಾಗುತ್ತಿದೆ. ಅದೇ ನ್ಯಾಯಾಧೀಶರು ಒಮ್ಮೆಯಾದರೂ ಭಕ್ತರ ಅಳಲು ಕೇಳಿದರೆ ಸಾಕಿತ್ತು. ಭಕ್ತರು ಕಣ್ಣೀರು ಹಾಕಿದ ಶಾಪವಾದರೂ ಜಿಲ್ಲಾಡಳಿತ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳಿಗೆ ತಟ್ಟಬಾರದೆ.

ಜನರ ಅಳಲನ್ನು ಆಲಿಸುವ ಪತ್ರಕರ್ತರು ಅಸಹಾಯಕರಾದರೂ, ಅವರ ಕುಟುಂಬ ಕಚೇರಿಯವರನ್ನು ಬಿಡಿಸಲು ಅವರ ಮರ್ಯಾದೆಯನ್ನೇ ಪಣಕ್ಕಿಟ್ಟು ಕಂದಾಯ ಇಲಾಖೆಯವರಿಂದ ನಿಂದಿಸಿಕೊಂಡು ಜನರನ್ನೇ ಮರೆತುಬಿಟ್ಟರು. ಇನ್ನೂ ಪೊಲೀಸರು ನಿಮ್ಮನ್ನೇ ಕಟ್ಟಿಹಾಕಿಬಿಟ್ಟರಲ್ಲಾ.

ಖಾಕಿ ಕಟುಕರಾದರೂ ಅವರೊಳಗೆ ಒಂದು ಹೃದಯವಿತ್ತು. ಆದರೆ ಅವರೇ ಕಂದಾಯ ಇಲಾಖೆಯವರ ಕಾಲಿಗೆ ತಮ್ಮ ಅಧಿಕಾರವನ್ನು ಇಟ್ಟು ಅವರ ಮನೆಯವರನ್ನೇ ದೇವಿ ದರ್ಶನಕ್ಕೆ ಕರೆದೊಯ್ಯುಲು ಆಗದೇ ಹಲ್ಲು ಕಡಿದು ನಿಲ್ಲುವ ಸ್ಥಿತಿ ತಂದುಬಿಟ್ಟರು.

ಇನ್ನಾದರೂ ಕಣ್ಣು ತೆರೆಯವ್ವ ತಾಯಿ. ಈ ವರ್ಷಕ್ಕೆ ಜಿಲ್ಲಾಡಳಿತ, ಕಂದಾಯ ಇಲಾಖೆ ದರ್ಪ, ಹಣ ವಸೂಲಿ ದಂಧೆ ಕೊನೆಗಾಣಿಸು. ಭಕ್ತರೇ ಭಕ್ತಿ ಇರಲಿ. ನಿಮ್ಮ ನೋವು, ಸಮಸ್ಯೆ ಪರಿಹಾರಕ್ಕೆ ಬರುವ ನೀವು ನೋವುಂಡು ದೇವಿ ದರ್ಶನ ಪಡೆಯುವುದನ್ನು ನಿಲ್ಲಿಸಿ. ಹಾಸನಾಂಬೆ ದೇವಿ ದರ್ಶನ ಸಾರ್ವಜನಿಕರಿಗೆ ಸೀಮಿತವಾಗಲಿ. ನ್ಯಾಯಾಂಗದ ಮೂಲಕವೇ ಪರಿಹಾರ ಪಡೆಯೋಣ.

ನಿಮ್ಮ ಹೋರಾಟ ಆರಂಭಿಸಿ. ಲಂಚ ತಿಂದು, ರಾಜಕಾರಣಿಗಳಿಗೆ ಲಂಚ ಕೊಟ್ಟು ದರ್ಪದಿಂದ ಮೆರೆಯುತ್ತಿರುವ ಜಿಲ್ಲಾಡಳಿತ, ಕಂದಾಯ ಇಲಾಖೆ ದೌರ್ಜನ್ಯ ಈ ವರ್ಷವೇ ಕೊನೆಯಾಗಲಿ. ಅವರು ಭಕ್ತರಿಗೆ ಕೊಟ್ಟ ನೋವು, ಹಾಕಿಸಿದ ಕಣ್ಣೀರಿಗೆ ಬೆಲೆ ತೆರಲೇಬೇಕು.

ಆ ತಾಯಿ ಅವರಿಗೆ ಜೀವನ ಪೂರ್ತಿ ಕಣ್ಣೀರು ಹಾಕಿಸುವ ಶಿಕ್ಷೆ ನೀಡು ತಾಯಿ. ಮುಂದಿನ ವರ್ಷದಿಂದ ಬದಲಾವಣೆ ಆಗಲೇಬೇಕು.

ಬನ್ನಿ ಕೈಜೋಡಿಸಿ ಹೋರಾಡಿ ನ್ಯಾಯ ಪಡೆಯೋಣ ಎಂಬ ಮಾತುಗಳು ಭಕ್ತರು ದೇವಿಯ ದರ್ಶನದ ವೇಳೆ ಆಡಿದ ಮಾತುಗಳಿವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *